ಬಳ್ಪ ಗ್ರಾಮದ ನೀರಜರಿ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಮತ್ತು ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ 11ನೇ ವರ್ಷದ ನೇಮೋತ್ಸವ ಜ. 11-12 ರಂದು ಜರಗಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಡಿ. 1 ರಂದು ನಡೆಯಿತು. ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ರವೀಂದ್ರ ರೈ ಗುತ್ತು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ನೇಮೋತ್ಸವ ಸಮಿತಿ ಮತ್ತು ಆಡಳಿತ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.