ಜಾಲ್ಸೂರು: ಮಾವಿನಕಟ್ಟೆ -ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಂಪರ್ಕ ರಸ್ತೆಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ

0

ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಿ.9ರಂದು ಬೆಳಿಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಗುದ್ದಲಿಪೂಜೆ ನೆರವೇರಿಸಿದರು.

ಶಾಸಕರ ಅನುದಾನ ರೂ. ಹತ್ತು ಲಕ್ಷದಲ್ಲಿ ನಿರ್ಮಾಣಗೊಳ್ಳಲಿರುವ ಈ ರಸ್ತೆ ಮಾವಿನಕಟ್ಟೆಯಿಂದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಾಲ್ಸೂರಿನ ಬಿಜೆಪಿ ಪ್ರಮುಖರಾದ ಸುಧಾಕರ ಕಾಮತ್ ವಿನೋಬನಗರ, ಜಯರಾಮ ರೈ ಜಾಲ್ಸೂರು, ದಿನೇಶ್ ಅಡ್ಕಾರು, ಮಾದವ ಗೌಡ ಕಾಳಮನೆ, ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಐ.ಕೆ. ಶರತ್ ಚಂದ್ರ ಕದಿಕಡ್ಕ, ಹೇಮಂತ್ ಮಠ, ಜಯರಾಜ್ ಕುಕ್ಕೇಟಿ, ಅಶೋಕ ಅಡ್ಕಾರು, ವೆಂಕಟೇಶ್ ನಡುಬೆಟ್ಟು, ಭಾಸ್ಕರ ಅಡ್ಕಾರು, ಗಣೇಶ್ ರೈ ಕುಕ್ಕಂದೂರು, ರವಿರಾಜ್ ಗಬ್ಬಲಡ್ಕ, ಗ್ರಾ.ಪಂ. ಸದಸ್ಯರಾದ ಶ್ರೀಮತಿ ಲೀಲಾವತಿ ವಿನೋಬನಗರ, ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ವಿಜಯ ಅಡ್ಕಾರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.