ಸುಳ್ಯ ಅಮರಸುದ್ದಿ ಪತ್ರಿಕೆಯ ವರದಿಗಾರ ಮಿಥುನ್ ಕರ್ಲಪ್ಪಾಡಿಯವರಿಗೆ ವಿಕಾಸ್ ಮೀನಗದ್ದೆ ಎಂಬವರು ಮೊಬೈಲ್ ಸಿಮ್ ವಿಚಾರಕ್ಕೆ ಸಂಬಂಧಿಸಿ ದೂರವಾಣಿಯಲ್ಲಿ ಜೀವ ಬೆದರಿಕೆ ಹಾಕಿದ್ದು, ಈ ಘಟನೆಯನ್ನು ಸುಳ್ಯ ಪ್ರೆಸ್ ಕ್ಲಬ್ ಖಂಡಿಸಿದೆ.
ಡಿ.13ರಂದು ಮಿಥುನ್ ನನ್ನ ತಾಯಿಯ ಜತೆ ಬಿಎಸ್‌ಎನ್‌ಎಲ್ ಕಚೇರಿಗೆ ಹೋಗಿ ತಾಯಿಯ ಮೊಬೈಲ್ ಸಿಮ್ ಸರಿ ಪಡಿಸಿ ಬಂದಿದ್ದು,ಬಿಎಸ್‌ಎನ್‌ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಸಂಸ್ಥೆಯು ಬಿ.ಎಸ್.ಎನ್.ಎಲ್ ಸಿಮ್ ಗೆ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿರುವ ಬಗ್ಗೆ ಯಾರೋ ವ್ಯಕ್ತಿಗಳು ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಸಂಸ್ಥೆಯ ವಿಕಾಸ್‌ರವರು ಆ ದೂರು ಮಾಡಿರುವುದು ಮಿಥುನ್ ಎಂದು ತಿಳಿದು ಅವರ ಮಾವನ ಮೊಬೈಲ್‌ಗೆ ಫೋನ್ ಮಾಡಿ ಬೆದರಿಸಿದ್ದು, ಡಿ.14ರಂದು ಬೆಳಗ್ಗೆ ಮಿಥುನ್ ರವರ ಮೊಬೈಲ್‌ಗೂ ಫೋನ್ ಮಾಡಿ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ವಿಕಾಸ್ ಮೀನಗದ್ದೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೋಲೀಸರಿಗೆ ನೀಡಿದ್ದು, ಕ್ರಮ ಕೈಗೊಳ್ಳಬೇಕೆಂದು ಪೋಲೀಸರಿಗೆ ದೂರು ನೀಡಿದ್ದಾರೆ.
ಇಂದು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಘಟನೆಯನ್ನು ಖಂಡಿಸಲಾಯಿತು ಮತ್ತು ಪೋಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.ಪ್ರೆಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.