ಲಯನ್ಸ್ ಇಂಟರ್ನ್ಯಾಷನಲ್,ಲಯನ್ಸ್ ಕ್ಲಬ್ ಸುಳ್ಯ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಆಶ್ರಯದಲ್ಲಿ ಡಿಸೆಂಬರ್ 16ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಮತ್ತು ಅಂಚೆ, ಅಪಘಾತ, ಆರೋಗ್ಯ ವಿಮಾ ಯೋಜನಾ ಶಿಬಿರ ನಡೆಯಿತು.
MJF ಮಾಜಿ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ಎಂ.ಬಿ. ಸದಾಶಿವ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಲಯನ್ ರಾಮಕೃಷ್ಣ ರೈ MJF ಅಧ್ಯಕ್ಷರು ಲಯನ್ಸ್ ಕ್ಲಬ್ ಸುಳ್ಯ ಇವರು ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿನೋದ್ ಕುಮಾರ್ ಕಾಮತ್ ಅಂಚೆ ನಿರೀಕ್ಷಕರು, ಸುಳ್ಯ ಉಪ ವಿಭಾಗ ಮೋಹನ ಎಂ.ಕೆ.ಸುಳ್ಯದ ಪ್ರಧಾನ ಅಂಚೆಕಚೇರಿಯ ಅಂಚೆ ಪಾಲಕರು, ಕಾರ್ಯಕ್ರಮದ ಸಂಯೋಜಕರಾದ ಲಯನ್ ವೀರಪ್ಪ ಗೌಡ ಕೆ ಉಪಸ್ಥಿತರಿದ್ದರು.
ಬಳಿಕ ನಡೆದ ನೊಂದಣಿ ಹಾಗೂ ತಿದ್ದುಪಡಿ ಅಭಿಯಾನದಲ್ಲಿ ನೂರಾರು ಮಂದಿ ಫಲಾನುಭವಿಗಳು ಭಾಗವಹಿಸಿ ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಂಡರು.
ಸಂಘಟಕರ ನಿರೀಕ್ಷೆಗೂ ಮೀರಿ ಫಲಾನುಭವಿಗಳು ಬಂದ ಹಿನ್ನೆಲೆಯಲ್ಲಿ ಅಭಿಯಾನವನ್ನು ಎರಡು ದಿನ ನಡೆಸಲು ತೀರ್ಮಾನ ಕೈಗೊಂಡು ನಾಳೆ ನಡೆಯಲಿರುವ ಅಭಿಯಾನಕ್ಕೂ ಟೋಕನ್ ಗಳ ವಿತರಣೆಯನ್ನು ಮಾಡಲಾಯಿತು.
ಅಧ್ಯಕ್ಷರಾದ ಲಯನ್ ರಾಮಕೃಷ್ಣ ರೈ, ಕಾರ್ಯದರ್ಶಿ ಲಯನ್ ರಾಮಚಂದ್ರ ಪಳ್ಳತ್ತಡ್ಕ, ಕೋಶಾಧಿಕಾರಿ ಲಯನ್ ರಮೇಶ್ ಶೆಟ್ಟಿ ಹಾಗೂ ಸದಸ್ಯರುಗಳು, ಮತ್ತು ಅಂಚೆ ಇಲಾಖೆ ಸುಳ್ಯ ಇದರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಸಹಕರಿಸಿದರು.