ಎಸ್.ಕೆ.ಎಸ್.ಎಸ್.ಎಫ್. ಗೂನಡ್ಕ ಪೇರಡ್ಕ ಶಾಖೆ ಇದರ ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕ ಹಾಗೂ ಸಂಶುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಧಾರ್ಮಿಕ ಉಪನ್ಯಾಸ ಡಿ.25ರಂದು ಪೇರಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಅಬ್ದುಲ್ ಖಾದರ್ ಮೊಟ್ಟೆಂಗಾರ್ ಹೇಳಿದರು.
ಡಿ.21ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದ ಅವರು, ಸಂಜೆ ಮಜ್ಲಿಸುನ್ನೂರ್ ಹಾಗೂ ಮೌಲೂದ್ ಕಾರ್ಯಕ್ರಮ ಉಸ್ತಾದ್ ನಝೀರ್ ಹುಸೈನ್ ಫೈಝಿ ತೋಡಾರ್ ಇವರ ನೇತೃತ್ವದಲ್ಲಿ ನಡೆಯುವುದು. ರಾತ್ರಿ ಸಮಾರೋಪ ಸಮಾರಂಭ ನಡೆಯುವುದು. ಸಯ್ಯದ್ ಎನ್ ಪಿ ಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ, ಕೇರಳ ದುಃವಾ ನೇತೃತ್ವ ವಹಿಸುವರು. ಯು.ಕೆ. ಮಹಮ್ಮದ್ ಹನೀಫ್ ನಿಝಾಮಿ ಅಲ್ ಮುರ್ಶಿದಿ ಮೊಗ್ರಾಲ್ ಮುಖ್ಯ ಪ್ರಭಾಷಣ ಮಾಡುವರು. ಹಲವು ಮಂದಿ ಗಣ್ಯರು ಸಮಾರಂಭ ದಲ್ಲಿ ಭಾಗವಹಿಸಲಿದ್ದಾರೆಂದು ಅವರು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಸ್ತಾದ್ ಅಹ್ಮದ್ ನ ಈಮ್ ಫೈಝಿ ಅಲ್ ಮಹಬರಿ ಪೇರಡ್ಕ, ಹನೀಫ್ ಮೊಟ್ಟೆಂಗಾರ್, ಕಲೀಲ್ ತೆಕ್ಕಿಲ್, ಸಾದುಮನ್ ತೆಕ್ಕಿಲ್, ಅಹ್ಮದ್ ಅಸ್ಪಕ್ ಇದ್ದರು.