ದೇವಚಳ್ಳ ಗ್ರಾಮದ ತಳೂರು ನಿವಾಸಿ ವಾಂತಿಚ್ಚಾಲು ಕರ್ನಲ್ ಡಾ ಕೃಷ್ಣಪ್ರಸಾದ್ ಜಿ ವಿ ಅವರು
ಡಿ. 27ರಿಂದ 29ರ ತನಕ ಬೆಂಗಳೂರು ಅರಮನೆ ಮೈದಾನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ) ದ ನೇತೃತ್ವದಲ್ಲಿ ಜರಗಲಿರುವ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ದೇಶರತ್ನ ಪ್ರಶಸ್ತಿ ಪುರಸ್ಕೃತರಾಗಲಿದ್ದಾರೆ.
ಇವರು ದೇವಚಳ್ಳ ಗ್ರಾಮದ ತಳೂರು ದಿ.ಡಾ ವಾಂತಿಚ್ಚಾಲು ಗೋಪಾಲಕೃಷ್ಣ ಭಟ್ ಹಾಗೂ ಶ್ರೀಮತಿ ಅನುರಾಧ ಜಿ ಭಟ್ ದಂಪತಿಗಳ ಪ್ರಥಮ ಪುತ್ರ.
ಭಾರತೀಯ ಭೂಸೇನೆಯಲ್ಲಿ 20 ವರುಷಗಳಿಂದ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಪ್ರಕೃತ ಪಶ್ಚಿಮಬಂಗಾಲದ ಬಾಗ್ ಡೋಗ್ರಾ ಸೇನಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉದಯಗಿರಿ ಪ್ರಾಥಮಿಕ ಶಾಲೆ,
ಬದಿಯಡ್ಕ, ಪ್ರೌಢಶಾಲೆಯನ್ನು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆ, ಎಸ್ ಡಿ ಎಂ ಉಜಿರೆಯಲ್ಲಿ ಪದವಿಪೂರ್ವ ಶಿಕ್ಷಣ ವ್ಯಾಸಂಗ ಮಾಡಿ, ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ ಹುಬ್ಬಳ್ಳಿಯಲ್ಲಿ ಎಂ ಬಿ ಬಿ ಎಸ್ ಪದವಿ ಪಡೆದು ಬೆಂಗಳೂರು ಕಮಾಂಡೋ ಆಸ್ಪತ್ರೆಯಲ್ಲಿ ಅರಿವಳಿಕೆ ವಿಭಾಗದಲ್ಲಿ ಎಂ ಡಿ ಪದವಿ ಪಡೆದರು.
ಇವರು ದೊಡ್ಡತೋಟದಲ್ಲಿರುವ ಗೋಪಾಲಕೃಷ್ಣ ಕ್ಲಿನಿಕ್ ನ ವೈದ್ಯರಾದ ಡಾ.ಮುರಳಿ ಮೋಹನ್ ಅವರ ಸಹೋದರ. ಕೃಷ್ಣ ಪ್ರಸಾದ್ ಅವರ ಪತ್ನಿ ಡಾ ಮಮತಾ ರವರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪುತ್ರ ಅಶ್ಮಿತ್ ಕೃಷ್ಣ ಭಟ್ ವಾಂತಿಚ್ಚಾಲು ದ್ವಿತೀಯ ಪಿ ಯು ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.