ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾಮನ್ ಸಾಫ್ಟ್ ವೇರ್ ಅಳವಡಿಕೆ ಬಗ್ಗೆ ಪರಿಶೀಲನೆ
ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ನಬಾರ್ಡ್ ಡಿ.ಡಿ.ಎಮ್.ರವರಾದ ಶ್ರೀಮತಿ ಸಂಗೀತಾ ಕರ್ತಾರವರು ಭೇಟಿ ನೀಡಿದರು. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಾಮನ್ ಸಾಫ್ಟ್ ವೇರ್ ಅಳವಡಿಕೆ ಬಗ್ಗೆ ಪರಿಶೀಲನೆಯನ್ನು ನಡೆಸಿ ಮಾಹಿತಿಯನ್ನು ಪಡಕೊಂಡರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸಂಘದ ವತಿಯಿಂದ ಶ್ರೀಮತಿ ಸಂಗೀತಾ ಕರ್ತಾರವರನ್ನು ಗೌರವಿಸಿದರು ಶ್ರೀಮತಿ ಸಂಗೀತಾ ಕರ್ತಾರವರು ಸಂಘದ ಸೂಪರ್ ಮಾರ್ಕೆಟ್ ಸಮೃದ್ಧಿ ಮಾರ್ಟ್ ಗೆ ಭೇಟಿಯನ್ನು ನೀಡಿ ವ್ಯವಹಾರಗಳ ಮಾಹಿತಿಯನ್ನು ಪಡಕೊಂಡು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವ್ಯವಹಾರವನ್ನು ನಡೆಸುತ್ತಿರುವುದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕರಾದ ರತನ್ ಕಳಿಗೆ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಕೇರ್ಪಳ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್, ಸಿಬ್ಬಂದಿಗಳಾದ ಸೀತಾರಾಮ ಉಳುವಾರು, ಶೀಲಾವತಿ ಎ., ನಯನ್ ಕಿರ್ಲಾಯ, ಅರ್ಜುನ್ ಬನ, ಮೇಘರಾಜ್ ಚೋಡಿಪಣೆ, ಕಿರಣ್ ಕುಂಟುಕಾಡು ಮತ್ತು ನವೋದಯ ಸ್ವ ಸಹಾಯ ಸಂಘಗಳ ಪ್ರೇರಕಿಯಾದ ಸವಿತಾ ಬಾಳೆಕಜೆ ಉಪಸ್ಥಿತರಿದ್ದರು.