ಬೆಂಗಳೂರು ವೈಟ್ ಫೀಲ್ಡ್ ನಲ್ಲಿ ಸಜ್ಜನ ಪ್ರತಿಷ್ಠಾನದ ವತಿಯಿಂದ ಅಂತರಾಷ್ಟ್ರೀಯ ತರಬೇತುದಾರರಿಂದ ಒಂದು ದಿನದ ಕಾರ್ಯಾಗಾರ

ಎಲ್ಲರನ್ನೂ ಅಭಿವೃದ್ಧಿ ಪೂರಕವಾಗಿ ಕೊಂಡೊಯ್ಯುವುದು ಅವರವರ ಸಂಸ್ಕೃತಿ ನಡೆ: ಅಶ್ವಥ್ ರಾಮಯ್ಯ ಸಜ್ಜನದ ಸಾಮಾಜಿಕ ಕಾಳಜಿ ಇಡೀ ಸಮಾಜಕ್ಕೆ ಮಾದರಿ :ರಾಜಶೇಖರ ರೈ

0

ಸಜ್ಜನ ಕನ್ನಡ ಕವಿಗಳು ಕೃತಿ ಬಿಡುಗಡೆ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಹಾಗೂ ಯೂನಿಕ್ ಕನ್ಸಟ್ಟೆಂಟ್ ಇದರ ಸಹಕಾರದೊಂದಿಗೆ ಫೆ.15 ರಂದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಪೋರ್ಚುನ್ ಸೆಲೆಕ್ಟ್ ಟ್ರಿನಿಟಿ ಯಲ್ಲಿ “ಅನುಕರಣೀಯ ಸಾಂಸ್ಥಿಕ ಸಂಸ್ಕೃತೀಯ ನಿರ್ಮಾಣ” ಎಂಬ ವಿಷಯದಲ್ಲಿ ಏಕ ದಿನ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸಾಸ್ಮೋಸ್ ಹೆಟ್ ಟೇಕ್ನಲಾಜಿಸ್ ಲಿಮಿಟೆಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ರಾಜಶೇಖರ ರೈ ಯವರು ಉದ್ಘಾಟಿಸಿ ಸಜ್ಜನ ಪ್ರತಿಷ್ಠಾನ ಒಂದು ಸಾಮಾಜಿಕ ಸಂಘಟನೆಯಾಗಿ ವಿವಿಧ ಸ್ತರದಲ್ಲಿ ತನ್ನ ಸೇವೆಯನ್ನು ಮಾಡುತ್ತಿದೆ ಸಣ್ಣಪುಟ್ಟ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತನ್ನಲ್ಲಾದ ಸಹಾಯ ಮಾಡುತ್ತ ಬಂದಿದೆ ಅದರೊಂದಿಗೆ ಅಂತರಾಷ್ಟ್ರೀಯ ತರಬೇತುದಾರರಿಂದ ಕಂಪನಿ ಉದ್ಯೋಗಿಗಳಿಗೆ ತರಭೇತಿ ನೀಡುವುವಂತ ಕೆಲಸ ಮಾಡುತ್ತಿದೆ ಇತಂಹ ಅನೇಕ ಸಮಾಜಮುಖಿ ಕೆಲಸಗಳು ಸಮಾಜಕ್ಕೆ ಮಾದರಿಯಾಗಿದೆ ಎಂದವರು ಹೇಳಿದರು

ಯೂನಿಕ್ ಕನ್ಸಲ್ಟೆಂಟ್ ನ ಮುಖ್ಯಸ್ಥ ವಿ.ಅಶ್ವಥ್ ರಾಮಯ್ಯ ರವರು ಸಂಸ್ಕೃತಿ ಬಗ್ಗೆ ವಿವಿಧ ಆಯಾಮಗಳಲ್ಲಿ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಉಮ್ಮರ್ ಬೀಜದಕಟ್ಟೆ ವಹಿಸಿದರು.

ಸಜ್ಜನ ಕನ್ನಡ ನಾಡು ನುಡಿ ರಾಜ್ಯ ಸಂಚಾಲಕ ನ್ಯಾಯವಾದಿ ಮಂಜುನಾಥ. ಬಿ ಕನ್ನಡ ಕವಿ ಕೃತಿ ಪರಿಚಯ ಕೃತಿ “ಸಜ್ಜನ ಕನ್ನಡ ಕವಿಗಳು” ಲೋಕಾರ್ಪಣೆ ಮಾಡಿದರು. ಸಜ್ಜನ ಪ್ರತಿಷ್ಠಾನದ ಮಂಜುನಾಥ್ ಹಿರಿಯೂರು ಅಶಯ ನುಡಯನ್ನಾಡಿದರು

ಸಮಾರಂಭದಲ್ಲಿ ಸುಬ್ಬರಾಮು ಟಿ,ಇಸ್ಮಾಯಿಲ್ ಜರಾ,ವಾಸು ಎಂ,ರವಿ ನಾರಾಯಣ, ಕಲಂದರ್ ಕೌಶಿಕ್,ಸದಾಶಿವ, ಕೌಶರ್ ಜಬಿನ್,ರತ್ನಾಕರ್ ಶೀನಾ ಕುಂದರ್,ತಾಜುದ್ದೀನ್ ಉಬೈದ್ ಬಿ ಎಂ,ಬಿ ಬಿ ಪಾಟೀಲ್,ಶ್ರೀ ವಿದ್ಯಾ ಎಸ್ ಅತಿಥಿಗಳಾಗಿ ಭಾಗವಹಿಸಿದರು.
ಪತ್ರಕರ್ತ ಶರೀಫ್, ಮಾಝಿನ್ ಬೀಜದಕಟ್ಟೆ ಕಾರ್ಯಕ್ರಮ ನಿರೂಪಿಸಿದರು
.