ಎ.ಬಿ. ಕ್ರಿಯೇಷನ್ಸ್ ನ ಹಾಡು ಹಕ್ಕಿಯ ಗೂಡು ನೇತಾಜಿ ರಂಗ ಮಂದಿರ ಬಿಳಗುಳ ಮೂಡಿಗೆರೆ ಚಿಕ್ಕಮಗಳೂರು ಇಲ್ಲಿ ಫೆ. 16 ರಂದು ನಡೆದ 50ನೇ ಸಂಚಿಕೆ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಸಂಗೀತ ಕಲರವ ನಡೆಸಿ ಬಳಿಕ ರಾಜ್ಯಮಟ್ಟದ ಸ್ವರ ಚೈತನ್ಯ ಪ್ರಶಸ್ತಿಯನ್ನು ಸುಳ್ಯದ ವಿಜಯ್ ಕುಮಾರ್ ಇವರು ಪಡೆದಿರುತ್ತಾರೆ .
ಇವರು ಸುಳ್ಯದ ಟಿ ಎ ಪಿ ಸಿ ಎಂ ಎಸ್ ಇಲ್ಲಿ ಉದ್ಯೋಗಿಯಾಗಿದ್ದು ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಇದರ ಸದಸ್ಯರಾಗಿದ್ದಾರೆ.
ಹಾಗೆಯೇ ಕಾರ್ಯಕ್ರಮದ ವೇದಿಕೆಯಲ್ಲಿ AB ಕ್ರಿಯೇಷನ್ ನ ಸಂಚಾಲಕರಾದ ಕುಮಾರಿ ಭೂಮಿ ಗೌಡ ಹಾಗೂ ಶ್ರೀಮತಿ ಅಂಬಾ ಶೆಟ್ಟಿ ಮೂಡಿಗೆರೆ ಹಾಗೆಯೇ ರಾಜ್ಯದ ಇತರೆಡೆಗಳಿಂದ ಬಂದ ಗಾಯಕ ಗಾಯಕಿಯರು ಮತ್ತು ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.