ಸೋಣಂಗೇರಿಯಲ್ಲಿ ಸುಳ್ಯ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲ್ಪಟ್ಟ ನೂತನ ಬಸ್‌ನಿಲ್ದಾಣ ಉದ್ಘಾಟನೆ

0

ಸಾರ್ವಜನಿಕರ ಅನುಕೂಲಕ್ಕಾಗಿ ರೋಟರಿ ಕ್ಲಬ್ ಸುಳ್ಯ ಇವರು ಸೋಣಂಗೇರಿ ಪೇಟೆಯಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣದ ಉದ್ಘಾಟನೆ ಇಂದು ( ಫೆ. 27 ರಂದು) ನಡೆಯಿತು.

ರೋಟರಿ ಜಿಲ್ಲಾ ಗವರ್ನರ್ ರೋ. ವಿಕ್ರಮ್ ದತ್ತ ನೂತನ ಬಸ್‌ಸ್ಟ್ಯಾಂಡ್‌ನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸಾವಿತ್ರಿ,
ರೋಟರಿ ಕ್ಲಬ್‌ನ ವಲಯ – 5 ಇದರ ಸಹಾಯಕ ರಾಜ್ಯಪಾಲ ರೊ. ವಿನಯ್‌ಕುಮಾರ್, ವಲಯ 5 ರ ಝೋನಲ್ ಲೆಫ್ಟಿನೆಂಟ್ ರೊ. ಪ್ರಭಾಕರನ್ ನಾಯರ್ ಕೆ. ಉಪಸ್ಥಿತರಿದ್ದರು.

ಬಸ್ ನಿಲ್ದಾಣವನ್ನು ನಿರ್ಮಿಸಿಕೊಟ್ಟ ಇಂಜಿನಿಯರ್ ಕೆ.ಎಸ್. ದೇವಿಪ್ರಸಾದ್ ಹಾಗೂ ಸಹಕರಿಸಿದವರನ್ನು ರೋಟರಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ರೋಟರಿ ಕ್ಲಬ್‌ನ ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ್, ಖಜಾಂಜಿ ಹರಿರಾಯ ಕಾಮತ್ ಹಾಗೂ ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರುಗಳು, ಊರವರು ಇದ್ದರು.

ಸುಳ್ಯ ರೋಟರಿ ಮಾಜಿ ಅಧ್ಯಕ್ಷ ಎನ್.ಎ. ಜೀತೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಸಮುದಾಯ ಸೇವಾ ನಿರ್ದೇಶಕ ಸನತ್ ಪಿ. ವಂದಿಸಿದರು.