ಕೆ.ವಿ.ಜಿ ದಂತ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಕೆಯ ಉದ್ಘಾಟನೆ

0

ಕೆ.ವಿ.ಜಿ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಎಲ್ಲಾ ಕ್ಲಾಸ್ ರೂಮ್ ಗಳಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸಿ ಬಳಿಕ ಅದರ ಉದ್ಘಾಟನೆ ಮಾ. ೦೪ರಂದು ನಡೆಯಿತು. ಇದರ ಉದ್ಘಾಟನೆಯನ್ನು ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಯವರು ಮಾಡಿ, ಈಗಿನ ಆಧುನಿಕ ಕಾಲಘಟ್ಟಕ್ಕೆ ಸರಿಯಾಗಿ, ತಮ್ಮ ಕೌಶಲ್ಯವನ್ನು ಉನ್ನತ್ತೀಕರಿಸಬೇಕೆಂದು ತಿಳಿಸಿದರು ಹಾಗೂ ದಂತ ಚಿಕಿತ್ಸೆಯಲ್ಲಿ ಡಿಜಿಟಲ್ ಡೆಂಟಿಸ್ಟ್ರಿ ಹಾಗೂ ಕೃತಕ ಬುದ್ದಿಮತ್ತೆಯನ್ನು ಅಳವಡಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಡಾ. ಮೋಕ್ಷ ನಾಯಕ್, ಉಪ ಪ್ರಾಂಶುಪಾಲೆ ಡಾ. ಶೈಲ ಪೈ, ವಿಭಾಗ ಮುಖ್ಯಸ್ಥರುಗಳಾದ ಡಾ. ಸವಿತಾ ಸತ್ಯಪ್ರಸಾದ್, ಡಾ. ಕೃಷ್ಣಪ್ರಸಾದ್, ಡಾ. ಜಯಪ್ರಸಾದ್, ಡಾ. ಸುಹಾಸ್ ರಾವ್, ಡಾ. ಪ್ರಸನ್ನ ಕುಮಾರ್, ಡೀನ್ ಗಳಾದ ಡಾ. ಮನೋಜ್ ಕುಮಾರ್, ಡಾ. ದೇವಿ ಪ್ರಸಾದ್, ಆಡಳಿತಾಧಿಕಾರಿ ಮಾಧವ ಬಿ.ಟಿ. ಮತ್ತು ಎಲ್ಲಾ ಭೋದಕ ಸಿಬ್ಬಂದಿಗಳು ಹಾಗೂ ಸ್ನಾತಕೊತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.