
ಕಟೀಲು ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸಮಿತಿ ಅಲೆಕ್ಕಾಡಿ, ಮುರುಳ್ಯ ಇದರ ಆಶ್ರಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಮಾ.೪ ರಂದು ಸಂಜೆ ಅಲೆಕ್ಕಾಡಿ ಶಾಲಾ ವಠಾರದಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.

ಪೂದೆ ಅವಳಿ ದೇವಸ್ಥಾನಗಳಾದ ಶ್ರೀಗಣಪತಿ ಮಲ್ಲಿಕಾರ್ಜುನ, ಮತ್ತು ಶ್ರೀ ವಿಷ್ಣುಮೂರ್ತಿ ದೇವಸ್ಥಾನಗಳಲ್ಲಿ ಪೂಜೆ ನಡೆದು ಬಳಿಕ ಪಸಾದ ವಿತರಣೆ, ಅನ್ನಸಂರ್ಪಣೆ ನಡೆಯಿತು. ಸಂಜೆ ಪೂದೆ ದೇವಸ್ಥಾನದಿಂದ ಜಾಥದೊಂದಿಗೆ ನಿಂತಿಕಲ್ಲು ಮೂಲಕ ಯಕ್ಷಗಾನ ತಂಡ ಮತ್ತು ದೇವಿಯನ್ನು ಚೆಂಡೆ ವಾದನಗಳೊಂದಿಗೆ ಕರೆ ತರಲಾಯಿತು.
ಚೌಕಿ ಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು . ಭಕ್ತಾದಿಗಳು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.