ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಂತ ತಪಾಸಣೆ ಮತ್ತು ಚಿಕಿತ್ಸಾ ಸೇವೆಯ ಕೇಂದ್ರ ಶುಭಾರಂಭ

0

ಕೆ.ವಿ.ಜಿ ದಂತ ಮಹಾವಿದ್ಯಾಲಯ & ಆಸ್ಪತ್ರೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆಯಲ್ಲಿ ದಂತ ಹಾಗೂ ಬಾಯಿಯ ಅಗತ್ಯ ಸಲಹೆ ತಪಾಸಣೆ & ಚಿಕಿತ್ಸಾ ಕೇಂದ್ರವನ್ನು ಮಾ. ೦೭ರಂದು ಪ್ರಾಂಭಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಆರೋಗ್ಯಧಿಕಾರಿ ಡಾ. ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತಾನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎ.ಓ.ಎಲ್.ಇ ಕಮಿಟಿ ಬಿ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ಯವರು ಮಾತನಾಡಿ, ಈ ಭಾಗದ ಎಲ್ಲಾ ಜನರ ಬಾಯಿಯ ಆರೋಗ್ಯದ ದೃಷ್ಠಿಯಿಂದ ಈ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಮನೋಜ್ ಕುಮಾರ್ ಎ.ಡಿ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಕೆ.ವಿ.ಜಿ ಡಿ ಸಿ, ಡಾ. ಕಿರಣ್ ಕುಮಾರ್, ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇವರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೆ.ವಿ.ಜಿ ಸಮುದಾಯ ದಂತ ಆರೋಗ್ಯ ಕೇಂದ್ರದ ಪ್ರೋಫೆಸರ್. ಆಗಿರುವ ಡಾ. ಹೇಮಂತ್ ಬಟ್ಟೂರ್ ಮಾತನಾಡಿ ಸಿ.ಹೆಚ್.ಓ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರತಿ ತಿಂಗಳ ಪ್ರಥಮ ಶುಕ್ರವಾರ ದಂತ ವೈದ್ಯಕೀಯ ಸೇವೆಯನ್ನು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ತಂಡ ನೀಡಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಸಿ.ಹೆಚ್.ಓ ಕು. ಸುಶ್ಮಿತಾರವರು ಸರ್ವರನ್ನು ವಂದಿಸಿದರು.