ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಇನ್ ಸ್ಪೈರ್ ಅವಾಡ್೯ಗೆ ವಿದ್ಯಾರಶ್ಮಿ ವಿದ್ಯಾಲಯದ ೯ನೇ ತರಗತಿಯ ವಿದ್ಯಾಥಿ೯ ಅಖಿಲೇಶ್ ರೈ ಅವರು ಆಯ್ಕೆಯಾಗಿದ್ದಾರೆ. ಈತ ಮಾಡಾವು ಗ್ರಾಮದ ಭಾಸ್ಕರ್ ರೈ ಮತ್ತು ಸಂಧ್ಯಾ ರೈ ದಂಪತಿಯ ಪುತ್ರ ಅವರಿಗೆ ಶಾಲಾ ಸಂಚಾಲಕರಾದ ಸವಣೂರು ಸೀತಾರಾಮ ರೈ ಕೆ, ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಮತ್ತು ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದಿಸಿದರು. ಶಿಕ್ಷಕಿ ಲಿಖಿತ ಎಂ ಎನ್ ಮಾಗ೯ದಶ೯ನ ನೀಡಿರುತ್ತಾರೆ.