ಎ.12 -20: ಸುಳ್ಯದಲ್ಲಿ ರಂಗಮಯೂರಿ ಕಲಾಶಾಲೆ ವತಿಯಿಂದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ

0

ವಿದ್ಯಾರ್ಥಿಗಳ ಕನಸು ನನಸಾಗಿಸುವ ವೇದಿಕೆ, ಮಕ್ಕಳ ಪುಟಾಣಿ ಪ್ರಪಂಚದಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಒತ್ತು ನೀಡಿ ಗ್ರಾಮೀಣ ಪ್ರದೇಶದ ಮಕ್ಕಳ ಕನಸನ್ನು ನನಸಾಗಿಸುವ ಪ್ರಯತ್ನ. 2018ರಲ್ಲಿ ಆರಂಭಗೊಂಡ ರಂಗಮಯೂರಿ ಕಲಾಶಾಲೆಯು ವಿವಿಧ ಕಲಾ ಪ್ರಕಾರಗಳ ತರಬೇತಿ ತರಗತಿ ನಡೆಸುವುದರೊಂದಿಗೆ ಬೇಸಿಗೆ ರಜಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಬಣ್ಣ “ಹೆಸರಿನಲ್ಲಿ ಬೇಸಿಗೆ‌ ಶಿಬಿರದ ಆಯೋಜನೆ ಮಾಡಲಾಗಿದೆ.

ಪ್ರತೀ ವರ್ಷದಂತೆ ಈ ವರ್ಷವೂ ಮಕ್ಕಳ ಬೇಸಿಗೆ ಶಿಬಿರ ‘ಬಣ್ಣ -2025’ ರ ದಿನ ನಿಗದಿಪಡಿಸಲಾಗಿದ್ದು ಎ.12 ರಿಂದ 20 ರ ತನಕ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ಶಿಬಿರದ ಆಯೋಜನೆ ಮಾಡಲಾಗಿದ್ದು
ಈ ಬಾರಿ ಮಕ್ಕಳಲ್ಲಿ ಬಹುಭಾಷಾ ವೈವಿಧ್ಯತೆಯೊಂದಿಗೆ ಹೊಸ ಕ್ರಿಯಾತ್ಮಕ ಆಲೋಚನೆಗಳೊಂದಿಗೆ ಶಿಬಿರವು ಮೂಡಿಬರಲಿದೆ.
ಪ್ರಸಿದ್ಧ ರಂಗ ಸಂಸ್ಥೆಗಳಾದ ನೀನಾಸಂ, ರಂಗಾಯಣ, ರಂಗ ಅಧ್ಯಯನ ಕೇಂದ್ರ, ಶಿವ ಸಂಚಾರದ ನಾಟಕ‌ ನಿರ್ದೇಶಕರು ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ತರಬೇತಿ ನೀಡಲಿದ್ದಾರೆ.

ಅಭಿನಯ ಪ್ರಧಾನ ರಂಗ ತರಬೇತಿಯೊಂದಿಗೆ ನಾಟಕ ರೂಪಕಗಳ ಹಬ್ಬದಜತೆ,ಕನ್ನಡ ,ಅರೆಭಾಷೆ ,ತುಳು, ಹಿಂದಿ, ಇಂಗ್ಲೀಷ್ ಭಾಷಾ ವೈವಿಧ್ಯ ನಾಟಕಗಳೊಂದಿಗೆ ನವರಸಗಳ ಅಭಿನಯ ಕಾರ್ಯಾಗಾರವೂ ನಡೆಯಲಿದೆ. ಭಾಷಾ ಶುಧ್ದಿ, ಸ್ಪಷ್ಟ ಉಚ್ಚಾರಣೆ, ರಂಗ ಚಲನೆ, ರಂಗ ಸಂಗೀತ, ರಂಗ ಪರಿಕರ ತಯಾರಿ, ರಂಗ ಪ್ರಸಾಧನ ಕಾರ್ಯಾಗಾರಕ್ಕೆ ಶಿಬಿರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು.

ಪ್ರತೀ ಮಗುವಿಗೂ ದೈವ ಭಕ್ತಿಯ ಪಾಠ, ಸಹಭೋಜನ, ಆಟ ಪಾಠ ತರಬೇತಿ ಹಾಗೂ ವಿಶಾಲವಾದ ಸಭಾಂಗಣದಲ್ಲಿ ಸ್ವಚ್ಛ ಪರಿಸರದ ಗಾಳಿ, ಬೆಳಕು‌ ಹಾಗೂ ಕುಡಿಯುವ ನೀರು, ಅಚ್ಚುಕಟ್ಟಾದ ಶೌಚಾಲಯ ವ್ಯವಸ್ಥೆಯೊಂದಿಗೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು, ರಂಗ ಮಯೂರಿ ಕಲಾ ಕುಟುಂಬದ ಜತೆ ಶಿಬಿರವು ನಡೆಯಲಿದೆ.
7 ರಿಂದ 17 ವಯಸ್ಸಿನ ಮಕ್ಕಳಿಗೆ ಶಿಬಿರದಲ್ಲಿ ಭಾಗವಹಿಸುವ ಅವಕಾಶವಿದ್ದು ಹೆಸರು ನೋಂದಾಯಿಸಲು
ಎ. 05 ಕೊನೆಯ ದಿನ ವಾಗಿದೆ ಎಂದು ರಂಗ ಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದರು.

ಸುಳ್ಯದ ಪ್ರೆಸ್ ಕ್ಲಬ್‌ ನಲ್ಲಿ ಮಾ.11 ರಂದು ಕರೆದಪತ್ರಿಕಾಗೋಷ್ಠಿಯಲ್ಲಿ “ಬಣ್ಣ 2025” ಶಿಬಿರದ ಕುರಿತು ವಿವರ ನೀಡಿದರು.

ಬಣ್ಣ ಶಿಬಿರವು 6‌ ನೇ ವರ್ಷದಆಯೋಜನೆಯಾಗಿದ್ದು ಸುಮಾರು 150 ಕ್ಕೂ ಮಿಕ್ಕಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿ ಮಗುವಿಗೆ 1800/- ರಂತೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು ಮಧ್ಯಾಹ್ನದ ಊಟ ಹಾಗೂ ಉಪಹಾರದ ವ್ಯವಸ್ಥೆ ಅಚ್ಚು ‌ಕಟ್ಟಾಗಿ ನಿರ್ವಹಿಸಲಾಗುವುದು.
ಎ.12 ರಂದು ಬೆಳಗ್ಗೆ ಶಿಬಿರದ ಉದ್ಘಾಟನಾ ಸಮಾರಂಭವು ನಡೆಯಲಿದೆ. ಎ.20 ರಂದು ‌ನಡೆಯಲಿರುವ ಸಮಾರೋಪ‌ಸಮಾರಂಭದಲ್ಲಿ ಶಿಬಿರದಲ್ಲಿ ಅಭ್ಯಾಸ ಮಾಡಿದ ಎಲ್ಲಾ ಭಾಷೆಯ ನಾಟಕ ಪ್ರದರ್ಶನ ಶಿಬಿರಾರ್ಥಿಗಳಿಂದ ಪ್ರಸ್ತುತ ಪಡಿಸಲಾಗುವುದು. ಅಲ್ಲದೆ ಮಕ್ಕಳಿಗೆ ವಿಶೇಷವಾಗಿ ಪರಿಸರ ಅಧ್ಯಯನ ಮತ್ತು ಪ್ರಕೃತಿ ಶಿಕ್ಷಣದ ವಿಷಯದ ಕುರಿತು ಪಾಠ ಪ್ರವಚನ ನಡೆಸಲಾಗುವುದು. ಕೊನೆಯ ದಿನದಂದು ಅಗ್ನಿ ಶಾಮಕ ದಳದ ಸಿಬ್ಬಂದಿಯವರಿಂದ ಆಕಸ್ಮಿಕ ಬೆಂಕಿಯನ್ನು ನಂದಿಸುವ ಕುರಿತು ಪ್ರಾತ್ಯಕ್ಷಿಕೆ ನಡೆಯಲಿರುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಕಲಾ ಶಾಲೆಯ ಕಮಿಟಿ ಸದಸ್ಯರಾದ ಶಿಕ್ಷಕಿ ಶ್ರೀಮತಿಸುನಂದ, ಶ್ರೀಮತಿ ಸೌಮ್ಯ ಆಳಂಕಲ್ಯ,ಶಶಿಕಾಂತ್ ಮಿತ್ತೂರು, ಕು.ಮೇಘಕೃಷ್ಣ ಕಾಯರ್ತೋಡಿ ಉಪಸ್ಥಿತರಿದ್ದರು.