ಸುಬ್ರಹ್ಮಣ್ಯ : ಸ್ವಚ್ಛತಾ ಕಾರ್ಯಕ್ರಮ

0

ಡಾlರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ವತಿಯಿಂದ ಅ.5 ರಂದು ಸುಬ್ರಹ್ಮಣ್ಯದ ಸ್ಥಾನಘಟ್ಟ, ಪರ್ವತಮುಖಿ, ಪಾರ್ಕಿಂಗ್ ಸ್ಥಳ ,ಹಾಗೂ ಕುಲ್ಕುಂದ ರಸ್ತೆ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನವರು ಪ್ರತಿ ಬಾನುವಾರ ತನ್ನ ಸುಮಾರು 60 ಸ್ವಯಂಸೇವಕಗಳನ್ನು ಒಳಗೊಂಡು ಬೆಳಿಗ್ಗೆ 6:30 ಗಂಟೆಯಿಂದ ಎಂಟೂವರೆ ಗಂಟೆ ತನಕ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಈ ಬಾರಿ ಅವರೊಂದಿಗೆ ಸುಬ್ರಹ್ಮಣ್ಯ ಲೀಜನ ಸೀನಿಯರ್ ಚೇಂಬರ್ ನ ಸದಸ್ಯರು ಕೂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತಾರೆ.