ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆಯವರಿಗೆ ಶೈನಿಂಗ್ ಸ್ಟಾರ್ ಟಾಲೆಂಟ್ ಅವಾರ್ಡ್

0

ಶೈನಿಂಗ್ ಸ್ಟಾರ್ ಟಾಲೆಂಟ್ ಅವಾರ್ಡ್ ಏಕಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ “ಮೊದಲ ಮಹಿಳಾ ಧ್ವನಿಮಾಯೆ ಕಲಾವಿದೆ” ಎಂಬ ಕಾರಣಕ್ಕಾಗಿ ಬುಕ್ ಆಫ್ ಯುನಿಕಾರ್ನ್ ವಿಶ್ವ ದಾಖಲೆಯಿಂದ “ಬಹುಮುಖ ಪ್ರತಿಭೆ ವೆಂಟ್ರಿಲೋಕ್ವಿಸಮ್” ವಿಭಾಗದಲ್ಲಿ ಕು. ಸಾಯಿಶ್ರುತಿ ಪಿಲಿಕಜೆಯವರು “ಶೈನಿಂಗ್ ಸ್ಟಾರ್ ಟಾಲೆಂಟ್ ಗೌರವ” ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಇವರು ಸುಳ್ಯ ತಾಲೂಕಿನ ಅಮರಪಡ್ನರಿನ ಪಿಲಿಕಜೆ ಶಿವಸಾಯಿ ಭಟ್ ಹಾಗೂ ಸುಜ್ಯೋತಿ ದಂಪತಿಗಳ ಪುತ್ರಿ.

ಇವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.