ಸಂಪಾಜೆ ಕೈಪಡ್ಕ ಶ್ರೀ ಸ್ವಾಮಿ ಕೊರಗಜ್ಜ ನೇಮೋತ್ಸವ ಹಾಗೂ ಹರಕೆ ಕೋಲ ಸಂಪನ್ನ

0

ದ.ಕ ಸಂಪಾಜೆ ಗ್ರಾಮದ ಕೈಪಡ್ಕ ಸದ್ರಿ ಕ್ಷೇತ್ರದಲ್ಲಿ ಗುಳಿಗ ದೈವ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಹರಕೆ ಕೋಲವು ಫೆ. 01 ರಂದು ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.

ಫೆಬ್ರವರಿ 1 ರಂದು ಬೆಳಿಗ್ಗೆ 6 ಗಂಟೆಗೆ ಗಣ ಹೋಮ ಮತ್ತು ಸ್ಥಳ ಶುದ್ಧೀಕರಣ , 7 ಗಂಟೆಗೆ ದೀಪಾರಾಧನೆ ಸಂಜೆ 6 ಗಂಟೆಗೆ ಎಣ್ಣೆ ಕೊಡುವುದು, ರಾತ್ರಿ 7 ಗಂಟೆಗೆ ಗುಳಿಗ ದೈವದ ಕೋಲ, ರಾತ್ರಿ 8: 30 ಕ್ಕೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ 9 ರಿಂದ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಮತ್ತು ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲವು ಮತ್ತು ಪ್ರಸಾದ ವಿತರಣೆ ನಡೆಯಿತು. ಊರು – ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಸ್ವಾಮಿ ಕೊರಗಜ್ಜನ ಸಿರಿಮುಡಿ ಕರಿಗಂಧ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು.