ಬೆಂಡೋಡಿ, ಕಲ್ಮಕಾರು  : ವಿಪತ್ತು ನಿರ್ವಹಣಾ ತಂಡದ ಶ್ರಮ ಸೇವೆಗೆ ಅಡ್ಡಿ

0

 

ತಂಡದ ಮೇಲೆ ಆರೋಪ

ಇಂದು ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಬೆಳ್ತಂಗಡಿ ಮತ್ತು ಸುಳ್ಯ ಘಟಕದವರು ಹರಿಹರ, ಬೆಂಡೋಡಿ, ಕಲ್ಮಕಾರು ಗಳಲ್ಲಿ ಶ್ರಮ ಸೇವೆಗೆ ಹೋಗಿದ್ದು ಇಂದು ಬೆಳಗ್ಗೆ ಬೆಂಡೋಡಿ ಮತ್ತು ಕಲ್ಮಕಾರಿನಲ್ಲಿ ಕೆಲಸ ಮಾಡಲು ತೆರಳಿದ್ದಾಗ ಅಲ್ಲಿ ಕೊಲ್ಲಮೊಗ್ರ ಗ್ರಾ.ಪಂ ಅಧ್ಯಕ್ಷ ಉದಯ ಕೊಪ್ಪಡ್ಕ, ಚಲನ್, ಪ್ರತೀಕ್ ಮತ್ತಿತರರು ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾವು ತಂದು ಹಾಕಿದ್ದ ಮರಳು ನೀವು ಮುಟ್ಟಬಾರದು ಎಂದೂ, ನಾವು ಕಂಟ್ರಾಕ್ಟ್ ತೆಗೆದುಕೊಂಡಿದ್ದು ನೀವು ಕೆಲಸ ಮಾಡಿದರೆ ನಮಗೆ ಬಿಲ್ ಆಗುವುದಿಲ್ಲ ಎಂದು ಕೆಲಸ ಮಾಡುವುದಕ್ಕೆ ಆಕ್ಷೇಪಿಸಿರುವುದಾಗಿ ತಿಳಿದು ಬಂದಿದೆ. ಇದಲ್ಲದೆ ನಮ್ಮ ಮೇಲೆ ಏರಿ ಬಂದಿರುವುದಾಗಿ ವಿಪತ್ತು ನಿರ್ವಹಣಾ ಘಟಕದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಬೆಂಡೋಡಿ ಮತ್ತು ಕಲ್ಮಕಾರಿನಿಂದ ವಿಪತ್ತು ನಿರ್ವಹಣಾ ಘಟಕದವರು ಕೆಲಸ ಮಾಡದೆ ತೆರಳಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here