ಆ. 31 : ದುಗ್ಗಲಡ್ಕದಲ್ಲಿ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ದುಗ್ಗಲಡ್ಕದ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆ. 31ರಂದು ನಡೆಯಲಿರುವುದು.
ಪೂರ್ವಾಹ್ನ 6 ಗಂಟೆಗೆ ಧ್ವಜಾರೋಹಣ, ಸ್ಥಳಶುದ್ಧಿ, ಗಣಪತಿ ಪ್ರತಿಷ್ಠೆ, ಪೂ. 7 ಗಂಟೆಗೆ ಶ್ರೀಗಣಪತಿ ಹವನ, ಪೂ. 9 ಗಂಟೆಗೆ ಮಕ್ಕಳಿಗೆ ಅಕ್ಷರಭ್ಯಾಸ, ಪೂ. 10 ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು ಅಪರಾಹ್ನ 2 ಗಂಟೆಯಿಂದ ಅಂಗನವಾಡಿ ಪುಟಾಣಿಗಳಿಂದ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶಶಿಧರ ಮಾವಿನಕಟ್ಟೆ ಮತ್ತು ಬಳಗದವರಿಂದ ಭಕ್ತಿಗೀತೆ ಗಾಯನ ನಡೆಯಲಿರುವುದು.
ಸಂಜೆ 6 ಗಂಟೆಗೆ ಶೋಭಾಯಾತ್ರೆ ನಡೆಯಲಿದ್ದು, ದುಗಲಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಹೊರಟು ಕಂದಡ್ಕ ಹೊಳೆಯಲ್ಲಿ ಜಲಸ್ತಂಭನ ಗೊಳ್ಳುವುದು. ವಿಶೇಷ ಆಕರ್ಷಣೆಯಾಗಿ ದುಗ್ಗಲಡ್ಕ ಶಿವಾಜಿ ಯುವಕ ವೃಂದ ಪ್ರಾಯೋಜಕತ್ವದ ಮಂಗಳೂರಿನ ಪ್ರಸಿದ್ಧ ತಂಡದವರಿಂದ ಡಿಜೆ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.