ಸೆ.30: ಅರಂಬೂರು ಮೂಕಾಂಬಿಕಾ ಭಜನಾ ಮಂದಿರದಲ್ಲಿ ದುರ್ಗಾಪೂಜೆ

0

 

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಸೆ.30 ರಂದು ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷವಾಗಿ ಲಲಿತಾ ಪಂಚಮಿಯಂದು ದುರ್ಗಾಪೂಜೆಯು ನಡೆಯಲಿರುವುದು.
ಸಂಜೆ ಗಂಟೆ 6.30 ರಿಂದ ಪೂಜಾ ಕಾರ್ಯ ಆರಂಭಗೊಳ್ಳಲಿರುವುದು. ರಾತ್ರಿ ಮಹಾ ಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ವಿಜಯ ದಶಮಿ ಪ್ರಯುಕ್ತ ಅದೇ ದಿನ ವಿಶೇಷವಾಗಿ ವಾಹನ ಪೂಜೆಯು ನಡೆಯಲಿರುವುದು ಎಂದು ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು ರವರು ತಿಳಿಸಿರುತ್ತಾರೆ‌.