ಅ.2- 10; ಸುಳ್ಯದಲ್ಲಿ 51ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ- ಸುಳ್ಯ ದಸರಾ

0

ವೈದಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗಿನೊಂದಿಗೆ ವೈಭವದ ಉತ್ಸವ

ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ ,ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಮತ್ತು ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 51ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ – ಸುಳ್ಯ ದಸರಾ – 2022 ವೈದಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ 2 ರಿಂದ 10 ರವರೆಗೆ ವಿಜ್ರಂಭಣೆಯಿಂದ ನಡೆಯಲಿದೆ.


ಅ. 2 ರಂದು ಬೆಳಿಗ್ಗೆ ಜ್ಯೋತಿ ವೃತ್ತದಿಂದ ಶ್ರೀ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ನೃತ್ಯ ಸಂಗಮ ಮತ್ತು ನೃತ್ಯ ರೂಪಕ ನಡೆಯಲಿದೆ.
ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅ.3ರಂದು ರಾತ್ರಿ 7.30ಕ್ಕೆ ವಿಠಲನಾಯಕ್ ಮತ್ತು ಬಳಗದವರಿಂದ ಗೀತಾ- ಸಾಹಿತ್ಯ- ಸಂಭ್ರಮ ಹಾಗೂ ಗಜಾನನ ನಾಟ್ಯಂಜಲಿಯ ನಿರ್ದೇಶಕಿ ಶ್ರೀಮತಿ ಸುಜಾತ ಕಲಾಕ್ಷೇತ್ರ ಮುಳ್ಳೇರಿಯ ಇವರ ಶಿಷ್ಯ ವೃಂದದವರಿಂದ ನೃತ್ಯ ಶಿಲ್ಪ ಕಾರ್ಯಕ್ರಮ ನಡೆಯಲಿದ್ದು, ಅ‌.4 ರಂದು ರಾತ್ರಿ ಫ್ರೆಂಡ್ಸ್ ಮ್ಯೂಸಿಕಲ್ ಇವರಿಂದ ಸಂಗೀತ ರಸಮಂಜರಿ,ಅ‌.5 ರಂದು ರಾತ್ರಿ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ನೃತ್ಯ ವೈಭವ, ಅ.6ರಂದು ರಾತ್ರಿ ರಂಗ ಮಯೂರಿ ಕಲಾ ಶಾಲೆ ಸುಳ್ಯ ಇವರಿಂದ ರಂಗ ಸೌರಭ ಸಾಂಸ್ಕೃತಿಕ ಸಂಜೆ,ಅ.7 ರಂದು ರಾತ್ರಿ ಜಿಲ್ಲೆಯ ಹೆಸರಾಂತ ನೃತ್ಯ ತಂಡಗಳಿಂದ ಡ್ಯಾನ್ಸ್‌ ಡ್ಯಾನ್ಸ್ , ಅ.8 ರಂದು ರಾತ್ರಿ ರವಿಚಂದ್ರ ಕನ್ನಡಿಕಟ್ಟೆ ಇವರ ಸಾರಥ್ಯದಲ್ಲಿ ಯಕ್ಷ ಗಾನ ನಾಟ್ಯ ಹಾಸವೈಭವ,ಅ.9 ರಂದು ರಾತ್ರಿ ಸೆವೆನ್ ನೋಟ್ಸ್ ದಿ ಮ್ಯೂಸಿಕ್ ಬ್ಯಾಂಡ್ ಬೈಲೂರು ಇವರಿಂದ ಅದ್ಧೂರಿ ಸಂಗೀತ ರಸಮಂಜರಿ ನಡೆಯಲಿದೆ. ಅ.10ರಂದು ಸಂಜೆ 3 ರಿಂದ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ವಿಶೇಷ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಅ.5 ರಂದು ಬೆಳಿಗ್ಗೆ 6.49ರಿಂದ ಮಕ್ಕಳಿಗೆ ಅಕ್ಷರಾಭ್ಯಾಸ, ಅ.7ರಂದು ಬೆಳಿಗ್ಗೆ 8ರಿಂದ ಲೋಕ ಕಲ್ಯಾಣಾರ್ಥಕವಾಗಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ನಡೆಯಲಿದೆ.ಅ.9 ರಂದು ರಾತ್ರಿ 10ಕ್ಕೆ ಶ್ರೀ ದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ವೈಭವದ ಮಹಾಪೂಜೆ ನಡೆಯಲಿದೆ.