ಪರಾಕ್ರಮ ಎಂದಾಗ ನೆನಪಾಗುವವರೇ ನೇತಾಜಿ : ಶ್ರೀಮತಿ ಜಯಲಕ್ಷ್ಮಿ ದಾಮ್ಲೆ

0

“ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ” ಎಂದು ಗುಡುಗಿದವರು ನೇತಾಜಿ ಸುಭಾಷ್ ಚಂದ್ರ ಬೋಸರು. ಇವರು ಬ್ರಿಟಿಷರಿಂದ ಭಾರತವನ್ನು ಮುಕ್ತಿಗೊಳಿಸುವುದಕ್ಕಾಗಿ ಸತತ ಪರಿಶ್ರಮಪಟ್ಟರು. ಬ್ರಿಟಿಷರ ಶತ್ರುವಾಗಿದ್ದ ಹಿಟ್ಲರ್ ನ ಸಹಕಾರದೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜನರನ್ನು ಒಗ್ಗೂಡಿಸುವ ಕಾರ್ಯ ಮಾಡಿದರು. 1920ರ ಅಸಹಕಾರ ಚಳುವಳಿ ಆಜಾದ್ ಹಿಂದ್ ಫೌಜ್ ಎಂಬ ಸೈನ್ಯ ಕಟ್ಟಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದವರು. ಹಂಗಾಮಿ ಸರ್ಕಾರ ರಚಿಸಿದ್ದ ಇವರು ಪ್ರಮುಖ ರಾಷ್ಟ್ರೀಯವಾದಿ ನಾಯಕರಾಗಿ ಗುರುತಿಸಿಕೊಂಡರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರ ವಹಿಸಿದ ಧೀಮಂತ ನಾಯಕರೆನಿಸಿಕೊಂಡಿದ್ದಾರೆ. ರೇಡಿಯೋ ಭಾಷಣದ ಮೂಲಕ ಜನರಲ್ಲಿ ರಾಷ್ಟ್ರೀಯತೆಯ ಕಿಚ್ಚನ್ನು ಹಚ್ಚಿದ ಅನರ್ಘ್ಯ ರತ್ನರನಿಸಿಕೊಂಡಿದ್ದಾರೆ. ಇವರ ರಾಷ್ಟ್ರಪ್ರೇಮ ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಹೇಳಿದರು.
ಅವರು ಜ.23 ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪರಾಕ್ರಮ ದಿವಸ ಅಥವಾ ನೇತಾಜಿ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.‌