ಮಂಡೆಕೋಲು ರುದ್ರಭೂಮಿಗೆ ಧರ್ಮಸ್ಥಳ ಯೋಜನೆಯಿಂದ ಸಿಲಿಕಾನ್ ಚೇಂಬರ್

0

ಮಂಜೂರಾತಿ ಪತ್ರ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸುಳ್ಯ ತಾಲೂಕು ವತಿಯಿಂದ ಅಜ್ಜಾವರ ವಲಯದ ಮಂಡೆಕೋಲು ಗ್ರಾಮದ ಹಿಂದೂ ರುದ್ರ ಭೂಮಿಗೆ 1,51000/ ದ ಸಿಲಿಕಾನ್ ಚೇಂಬರನ್ನು ಯೋಜನಾಧಿಕಾರಿಯವರಾದ ನಾಗೇಶ್ ರವರಿಂದ ತಾಲೂಕು ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಜನ ಜಾಗೃತಿ ವಲಯ ಅಧ್ಯಕ್ಷರಾದ ಶಿವಪ್ರಕಾಶ್ ಅಡ್ಪಂಗಾಯ ವಲಯದ ಮೇಲ್ವಿಚಾರಕರಾದ ವಿಶಾಲ ಸೇವಾ ಪ್ರತಿನಿಧಿ ವೇದಾವತಿ ಒಕ್ಕೂಟದ ಪದಾಧಿಕಾರಿಗಳಾದ ವಿಶಾಲಾಕ್ಷಿ ಮೋಹಿನಿ ರವರಿಂದ ಪಂಚಾಯಿತಿ ಉಪಾಧ್ಯಕ್ಷರಾದ ಅನಿಲ್ ಪಂಚಾಯತ್ ಸಿಬ್ಬಂದಿಯಾದ ಬಾಲಚಂದ್ರ ಪಂಚಾಯತ್ ಮಾಜಿ ಸದಸ್ಯರಾದ ಮೋಹಿನಿ ರವರಿಗೆ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.