ಉಬರಡ್ಕ ಮಿತ್ತೂರು : ಉಚಿತ ಆರೋಗ್ಯ ತಪಾಸಣಾ ಶಿಬಿರ

0

ನಿವೇದಿತಾ ಸಂಚಲನಾ ಸಮಿತಿ ಉಬರಡ್ಕ ಮಿತ್ತೂರು, (ಮಾತೃ ಸಂಸ್ಥೆ ) ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ,ಗ್ರಾಮ ಪಂಚಾಯತ್ ಉಬರಡ್ಕ ಮಿತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಉಬರಡ್ಕ ಗ್ರಾಮದ ಪಾನತ್ತಿಲ ಕಾಲೊನಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಕುಮಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಿವೇದಿತಾ ಸಂಚಲನಾ ಸಮಿತಿಯ ಅಧ್ಯಕ್ಷೆ ರೇಖಾ ಸಭಾಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಅಭಿವೃದ್ಧಿ ಅಧಿಕಾರಿ ವಿದ್ಯಾಧರ್, ಸಿ ಯಚ್ ಓ ದೀಕ್ಷಿತಾ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇವತಿ ಕೆ, ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ಇದರ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ( ರಿ) ಸುಳ್ಯ ಇದರ ಪದಾಧಿಕಾರಿಗಳು, ನಿರ್ದೇಶಕರುಗಳು, ನಿವೇದಿತಾ ಸಂಚಲನಾ ಸಮಿತಿ ಉಬರಡ್ಕ ಮಿತ್ತೂರಿನ ಎಲ್ಲ ಸದಸ್ಯರು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ರೇಖಾ ಪ್ರಾರ್ಥಿಸಿದರು, ಟ್ರಸ್ಟ್ ನ ಜತೆ ಖಜಾಂಜಿ ಶಾರದಾ ಶೆಟ್ಟಿ ಸ್ವಾಗತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೇದಿತಾ ಸಂಚಲನಾ ಸಮಿತಿ ಉಬರಡ್ಕ ಇದರ ಸಹ ಸಂಚಾಲಕ ವಸಂತಿ ಕಲ್ಚರ್ ಧನ್ಯವಾದ ಸಮರ್ಪಿಸಿದರು.
ಟ್ರಸ್ಟ್ ನ ಜೊತೆ ಕಾರ್ಯದರ್ಶಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.