ಸುಬ್ರಹ್ಮಣ್ಯದ ಒಳಚರಂಡಿ ಹಾಗೂ ಕೆ.ಎಸ್.ಆರ್.ಟಿ.ಸಿ ರಸ್ತೆ ಬಗ್ಗೆ ಗಮನ ಕೊಡುತ್ತೇನೆ: ಜಿಲ್ಲಾಧಿಕಾರಿ ಮುಲೈ ಮುಗಿಲನ್

0

ಒಳಚರಂಡಿ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮ ಪಂಚಾಯತ್, ಪ್ರಮುಖರ ಸಭೆ ನಡೆಸಿ, ಯೋಜನೆ ರೂಪಿಸಿ, ವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ ಹಾಗೂ ಸುಬ್ರಹ್ಮಣ್ಯದ ಕೆ .ಎಸ್.ಆರ್.ಟಿ.ಸಿ ರಸ್ತೆ ಬಗ್ಗೆ ಗಮನ ಕೊಡುತ್ತೇನೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರ ಜೊತೆ ನ.8 ರಂದು ಮಾತನಾಡಿದರು. ಇಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಜೊತ್ರೆಯೊಳಗಡೆ ಸರಿಪಡಿಸುತ್ತೇವೆ ಎಂದು ಹೇಳಲಾಗಲ್ಲ. ಸುಬ್ರಹ್ಮಣ್ಯಕ್ಕೆ ಹೊಂದಿಕೊಳ್ಳುವಂತೆ ಯೋಜನೆ ರೂಪಿಸಿ ಕ್ರಮಕೈಗೊಳ್ಳಲು ಸೂಚಿಸಲಾಗುವುದು ಎಂದರು.

ಕಾಡು ಪ್ರಾಣಿಗಳ ಉಪಳಟ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಂಡುಬರುತ್ತದೆ. ಅರಣ್ಯ ಇಲಾಖೆ ಜೊತೆ ಪ್ರತ್ಯೇಕ ಸಭೆ ನಡೆಸಿ, ಏನು ಕ್ರಮವಹಿಸಬೇಕು ಎಂಬುದನ್ನು ನಿರ್ದೇಶನ ನೀಡಲಾಗುವುದು. ಸುಬ್ರಹ್ಮಣ್ಯದ ಕುಮಾರಧಾರದ ಹೂಳೆತ್ತಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಗಣಿ ಇಲಾಖೆ ಜೊತೆ ಮಾತನಾಡುತ್ತೇನೆ ಎಂದರು. ದೇವಸ್ಥಾನದ ಕಾರಿನ ವಿಚಾರವಾಗಿ ಪ್ರಶ್ನಿಸಿದಾಗ ಅದನ್ನು ತರಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಸುಬ್ರಹ್ಮಣ್ಯ ಕೆ.ಎಸ್. ಆರ್.ಟಿ.ಸಿ ರಸ್ತೆ ಬಗ್ಗೆ ಪ್ರಶ್ನಿಸಿದಾಗ ಇದರ ಬಗ್ಗೆ ತಿಳಿದು ಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು. ಸುಸೂತ್ರ ಜಾತ್ರೆ ನಡೆಸಲು ನಿರ್ದೇಶನ; ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಮಹೋತ್ಸವ ಸುಸೂತ್ರವಾಗಿ ನಡೆಸಲು ಸಲಹೆ ಸೂಚನೆಗಳನ್ನು ಪಡೆದು, ನಿರ್ದೇಶನಗಳನ್ನು ನೀಡಲಾಗಿದೆ. ಈ ಹಿಂದೆ ನಡೆದ ಜಾತ್ರಾ ಮಹೋತ್ಸವದಲ್ಲಿ ಕೈಗೊಂಡ ವ್ಯವಸ್ಥೆಗಳನ್ನು ಹಾಗೂ ಇಂದಿನ ಸಭೆಯಲ್ಲಿ ವ್ಯಕ್ತವಾದ ಸಲಹೆ ಸೂಚನೆಗಳನ್ನು ಪಡೆದು ಅದರಂತೆ ಮುಂದುವರಿಸಲಾಗುವುದು ಸುಸೂತ್ರ ಜಾತ್ರೆ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದರು. .