ಕೊಲ್ಲಮೊಗ್ರ ಹರಿಹರ ಪಲ್ಲತಡ್ಕ ಪ್ರಾ.ಕೃ. ಪ. ಸಂಘದಲ್ಲಿ ಕ್ರೀಡಾಕೂಟ ಪ್ರಯುಕ್ತ ಪೂರ್ವಭಾವಿ ಸಭೆ

0

ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಕ್ರೀಡಾಕೂಟದ ಪೂರ್ವ ಭಾವಿ ಸಭೆಯು ಮಾ. 5 ರಂದು ಸಂಘದ ಅಧ್ಯಕ್ಷರಾದ ಡಿ ಎಸ್ ಹರ್ಷಕುಮಾರ್ ಇವರ ಅಧ್ಯಕ್ಷತೆಯಲ್ಲಿ ಹರಿಹರ ಪಲ್ಲತ್ತಡ್ಕದ ಪ್ರಧಾನ ಕಛೇರಿಯ ವಠಾರದಲ್ಲಿ ನಡೆಯಿತು.

ಮಾ. 16ರಂದು ಸಂಘದ ಕಾರ್ಯವ್ಯಾಪ್ತಿಯ ಸದಸ್ಯರುಗಳಿಗೆ, ನವೋದಯ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ,ಆಡಳಿತ ಸದಸ್ಯರು ಹಾಗು ಸಿಬ್ಬಂದಿಗಳಿಗೆ ಹಾಗು ಮಾ. 17ರಂದು ಸುಳ್ಯ, ಕಡಬ ತಾಲೂಕಿನ ಆಹ್ವಾನಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು, ನವೋದಯ ಸಂಘಗಳಿಗೆ ವಿವಿಧ ಕ್ರೀಡಾ ಕೂಟ ನಡೆಯಲಿದೆ.
ಸಭೆಯಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ, ಉಪಾಧ್ಯಕ್ಷರಾದ ಕಮಲಾಕ್ಷ ಮುಳ್ಳುಬಾಗಿಲು, ದಯಾನಂದ ಕಟ್ಟೆಮನೆ, ರಾಧಕೃಷ್ನ ಬಿಲ್ಲಾರಮಜಲು, ಕ್ರೀಡಾ ಸಂಯೋಜಕ ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಕಡ್ಲಾರ್, ಶೇಖರ ಅಂಬೆಕಲ್ಲು, ಸ್ಮರಣಸಂಚಿಕೆ ಸಮಿತಿಯ ಪ್ರಧಾನ ಸಂಚಾಲಕರಾದ ಪ್ರಭಾಕರ ಕಿರಿಭಾಗ, ಮಾಜಿ ಕಾರ್ಯನಿರ್ವಾಹಣಾದಿಕಾರಿ ಶೇಷಪ್ಪ ಗೌಡ ಕಿರಿಭಾಗ, ಸಂಘದ ಉಪಾದ್ಯಕ್ಷ ಶೇಖರ ಅಂಬೆಕಲ್ಲು, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರುಗಳು, ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ಸ್ವಾಗತಿಸಿ ಶೇಖರ ಅಂಬೆಕಲ್ಲು ದನ್ಯವಾದ ಮಾಡಿದರು.

ವರದಿ: ಕುಶಾಲಪ್ಪ ಕಾಂತುಮೇರಿ