ರೋಟರಿ ವತಿಯಿಂದ ಅಂಗನವಾಡಿಗಳ ಪುನರುಜ್ಜೀವನ : ಗವರ್ನರ್ ಹೆಚ್.ಆರ್.ಕೇಶವ

0


ರೋಟರಿ ಜಿಲ್ಲೆಯ ವತಿಯಿಂದ ಂಗನವಾಡಿಗಳ ಪುನರುಜ್ಜೀವನಕ್ಕಾಗಿ ಯೋಜನೆ ರೂಪಿಸಿದ್ದು, 150 ಅಂಗನವಾಡಿಗಳಿಗೆ ಈಗಾಗಲೇ ಸೌಲಭ್ಯಗಳನ್ನು ಮುಟ್ಟಿಸಲಾಗಿದೆ. ಇನ್ನು 600 ಅಂಗನವಾಡಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ರೋಟರಿ ಜಿಲ್ಲಾ ಗವರ್ನರ್ ರೊಟೇರಿಯನ್ ಹೆಚ್.ಆರ್.ಕೇಶವ ಹೇಳಿದರು. ಅವರು ಇಂದು ಸುಳ್ಯ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ರೊಟೇರಿಯನ್ ಲತಾ ಮಧುಸೂದನ್‌ರವರ ಕಸ್ತೂರಿ ನಿವಾಸದಲ್ಲಿ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಮಾತನಾಡಿದರು.


ಅಂಗನವಾಡಿಯ ಮಕ್ಕಳು ಮುಗ್ಧರಾಗಿದ್ದು, ಅವರಿಗೆ ಅಂಗನವಾಡಿಯಲ್ಲಿ ಇರಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ ಎಳವೆಯಿಂದಲೇ ಮಕ್ಕಳ ವಿಕಾಸ ಸಾಧ್ಯವಾಗುತ್ತದೆ. ಅಂಗನವಾಡಿಗಳು ಈಗ ಮಕ್ಕಳ ಮೊದಲ ಪಾಠಶಾಲೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಮೊದಲ ಗುರು ಆಗಿದ್ದಾರೆ. ಅದಕ್ಕಾಗಿ ೨೦೧೮ನೇ ಇಸವಿಯಲ್ಲಿ ರೋಹಿನಾಥ್‌ರವರು ಜಿಲ್ಲಾ ಗವರ್ನರ್ ಆಗಿದ್ದಾಗ ಆರಂಭಿಸಿದ ಅಂಗನವಾಡಿಗಳ ಪುನರುಜ್ಜೀವನ ಕಾರ್ಯಕ್ರಮವನ್ನು ನನ್ನ ಅವಧಿಯಲ್ಲಿ ಮುಂದುವರಿಸಿದ್ದೇನೆ ಎಂದು ಹೆಚ್.ಆರ್.ಕೇಶವ್ ಹೇಳಿದರು.
೧೮ ವರ್ಷಕ್ಕಿಂತ ಮೇಲ್ಪಟ್ಟ ಅನಕ್ಷಸ್ಥರನ್ನು ಅಕ್ಷರಸ್ಥರನ್ನಾಗಿಸುವ ಯೋಜನೆ ಹಾಗೂ ಮಳೆನೀರ ಕೊಯ್ಲು ಕಾರ್ಯಕ್ರಮ ನಮ್ಮ ಅಜೆಂಡಾದಲ್ಲಿದೆ. ಅಗತ್ಯವಿರುವ ಜಿಲ್ಲೆಗಳಲ್ಲಿ ಅದನ್ನು ಅನುಷ್ಠಾನಿಸುತ್ತಿದ್ದೇವೆ ಎಂದು ಹೇಳಿದ ರೋಟರಿ ಗವರ್ನರ್ ಕೇಶ್ವ, ನಮ್ಮ ದೇಶದಲ್ಲಿ ಪೋಲಿಯೋ ನಿರ್ಮೂಲನೆಗೊಂಡಿದ್ದರೂ ಪಕ್ಕದ ರಾಷ್ಟ್ರಗಳಲ್ಲಿ ಅದು ಇದ್ದರೆ ಮತ್ತೆ ನಮ್ಮಲ್ಲಿಗೆ ಹರಡಬಹುದು ಎಂಬ ಕಾರಣಕ್ಕಾಗಿ ಇಡೀ ಜಗತ್ತನ್ನೇ ಪೊಲೀಯೋ ಮುಕ್ತಗೊಳಿಸಲು ರೋಟರಿ ಇಂಟರ್‌ನ್ಯಾಷನಲ್ ಕಾರ್ಯಕ್ರಮ ಯೋಜಿಸಿದೆ ಎಂದು ಅವರು ಹೇಳಿದರು.


ಸುಳ್ಯ ರೋಟರಿ ಅಧ್ಯಕ್ಷ ರೋ.ಆನಂದ ಖಂಡಿಗ ಸ್ವಾಗತಿಸಿ, ರೋಟರಿ ವತಿಯಿಂದ ಮಾಡಿರುವ ಕಾರ್ಯಕ್ರಮಗಳ ವಿವರ ನೀಡಿದರು. ಕಾರ್ಯದರ್ಶಿ ಕಸ್ತೂರಿಶಂಕರ್ ವಂದಿಸಿದರು.