ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಕಾರಣಿಕ ಪುರುಷರಾಯ ಬೆಟ್ಟದಲ್ಲಿ ನೂತನವಾಗಿ ನಿರ್ಮಿತವಾದ ಹೊಸಳಿಗಮ್ಮ, ಪುರುಷರಾಯ ಮತ್ತು ಇತರ ದೈವಗಳ ದೈವಸ್ಥಾನದಲ್ಲಿ ದೈವಗಳ ಪ್ರತಿಷ್ಠಾ ಕಾರ್ಯದ ನಿಮಿತ್ತ ಮೇ..9 ರಾತ್ರಿ ಮತ್ತು ಮೇ..10 ರಂದು ವಿವಿಧ ವೈಧಿಕ ವಿದಿವಿಧಾನಗಳು ನೆರವೇರಿತು.
ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ನೇತೃತ್ವದಲ್ಲಿ ಋತ್ವಿಜರು ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.
ಈ ನಿಮಿತ್ತವಾಗಿ ಮೇ.. 9ಮುಂಜಾನೆ ಕುಕ್ಕೆ ದೇವಳದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ 108 ಸೀಯಾಭಿಷೇಕ ನೆರವೇರಿತು. ಬಳಿಕ ಸಂಜೆ ಪುರುಷರಾಯ ಬೆಟ್ಟದಲ್ಲಿ ಪಾಶುಪತಾಸ್ತ್ರ ಹೋಮ, ಮಂತ್ರವಾದ ಪ್ರಕ್ರೀಯೆ ನಡೆಯಿತು. ಮೇ..10 ರಂದು ಬೆಳಗ್ಗೆ ತಿಲಹೋಮ, ಪವಮಾನ ಹೋಮ, ಚಕ್ರಾಬ್ಜ ಮಂಡಲಪೂಜೆ, ಸಾಯ್ಯುಜ್ಯಪೂಜೆ ನೆರವೇರಿತು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಂ ಎಸ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯ ಲೋಕೇಶ್ ಮುಂಡುಕಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶ್ರೀ ದೇವಳದ ನಾರಾಯಣ ಭಟ್, ಷಣ್ಮುಖ ಉಪರ್ಣ, ಅಭಿಯಂತರ ಉದಯ ಕುಮಾರ್, ದೇವಳದ ಪಾಟಾಳಿ ನವೀನ್, ಹಿರಿಯರಾದ ನಾಗೇಶ್ ಎ.ವಿ, ಮೋಂಟ ಮಲೆ, ದಿನಕರ ಕಾಲನಿ,ಭಾಸ್ಕರ ಅರ್ಗುಡಿ, ಜಗದೀಶ್ ನೂಚಿಲ, ದಯಾನಂದ ದೋಣಿಮನೆ, ಪುರುಷೋತ್ತಮ, ರಮೇಶ್, ಶ್ರೀ ದೇವಳದ ಮಹೇಶ್ ಕುಮಾರ್ ಎಸ್, ಮೋಹನ್ ಎಂ.ಕೆ, ನಂದೀಶ್, ಮೋಹನ್ ಕಲಾಕೃಷ್ಣ, ರಾಜರಾಮ ಶೆಟ್ಟಿ, ಲೋಕೇಶ್ ಎಂ.ಆರ್, ಲಕ್ಷ್ಮಣ ಎನ್.ಸಿ, ನಾಗೇಶ್ ಸಂಪ್ಯಾಡಿ, ಕಿರಣ್ ದೇವರಗದ್ದೆ, ತಾರನಾಥ್ ಕೋನಡ್ಕ, ದಿವಿನ್ ಭಟ್, ಸ್ಥಳಿಯರಾದ ಲೋಕೇಶ್ ಬಿ,ಎನ್, ರತ್ನಾಕರ ಸುಬ್ರಹ್ಮಣ್ಯ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಪೋಟೋ: ಶಾಂತಲಾ ಸ್ಟುಡಿಯೊ ಸುಬ್ರಹ್ಮಣ್ಯ