ಸುಳ್ಯದಲ್ಲಿ ಕಳೆದ 50 ವರ್ಷಗಳಿಂದ ಗ್ಯಾರೇಜ್ ಉದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಐಡಿಯಲ್ ಅಟೋ ವರ್ಕ್ಸ್ ಮಾಲಕರಾದ ಐಡಿಯಲ್ ಭಾಸ್ಕರ ಗೌಡ ಮತ್ತು ಶ್ರೀಮತಿ ಶೀಲಾವತಿ ದಂಪತಿಯ 50 ನೇ ವರ್ಷದ ವೈವಾಹಿಕ ಜೀವನದ ಸುವರ್ಣ ಸಂಭ್ರಮ ಕಾರ್ಯಕ್ರಮ ಸುಳ್ಯದ ಭಾಸ್ಕರ ಗೌಡ ರವರ ಮನೆಯಲ್ಲಿ ನಡೆಯಿತು.
ಬೆಳಗ್ಗೆ ಪುರೋಹಿತ ವೆಂಕಟೇಶ ಶಾಸ್ತ್ರೀಯ ವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಿಸಲಾಯಿತು.
ಬಳಿಕ ಕೇಕ್ ಕತ್ತರಿಸಿ ದಾಂಪತ್ಯ ಬದುಕಿನ ಸುವರ್ಣ ಸಂಭ್ರಮವನ್ನು ಬಂಧು ಮಿತ್ರರ ಸಮ್ಮುಖದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ
ಮಕ್ಕಳು, ಅಳಿಯಂದಿರು, ಸೊಸೆ, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಬಂಧು- ಮಿತ್ರರು ಉಪಸ್ಥಿತರಿದ್ದು ಶುಭ ಹಾರೈಸಿದರು. ಆಗಮಿಸಿದ ಬಂಧು ಮಿತ್ರರನ್ನು ಯುವ ಉದ್ಯಮಿ ಗುರುರಾಜ್ ಬಿ ಯವರು ಸ್ವಾಗತಿಸಿದರು. ಶಿವಪ್ರಸಾದ್ ಆಲೆಟ್ಟಿ ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅವಿನ್ ಬೆಟ್ಟಂಪಾಡಿ ಸಹಕರಿಸಿದರು.
ಮಧ್ಯಾಹ್ನ ಸಹಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು.