ಮುರುಳ್ಯ ಗ್ರಾಮ ಪಂಚಾಯತ್ ಬೇಸಿಗೆ ಶಿಬಿರ ಸಮಾರೋಪ

0

ಮುರುಳ್ಯ ಗ್ರಾಮ ಪಂಚಾಯತಿಯ ಬೇಸಿಗೆ ಶಿಬಿರವು ಗ್ರಾಮ ಪಂಚಾಯತಿ ಅಧ್ಯಕ್ಷೆ ಕು.ಜಾನಕಿ ಮುರುಳ್ಯರಿಂದ ಉದ್ಘಾಟನೆಗೊಂಡು ವಿವಿಧ ಚಟುವಟಿಕೆಗಳ ಮೂಲಕ ಸಕ್ರಿಯಗೊಂಡಿತು. ಮಕ್ಕಳ ಕ್ರಿಯಾಶೀಲತೆಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಗ್ರಾಮ ಪಂಚಾಯತಿಯ ಅಮೃತ ಸರೋವರ ಪೂದೆಕೆರೆ,ಸಂಜೀವಿನಿ ಸದಸ್ಯೆಯರ ಹೈನುಗಾರಿಕೆ,ಮಲ್ಲಿಗೆ ಕೃಷಿ, ವಿಶೇಷ ಚೇತನ ಶ್ರೀ ನವೀನ ಕಳತ್ತಜೆಯವರ ಜೇನುಕೃಷಿ ಮತ್ತಿತರ ಸ್ಥಳೀಯ ಕೃಷಿ ಉದ್ಯಮಗಳ ವೀಕ್ಷಣೆಗೆ ಹೊರಸಂಚಾರ ಚಟುವಟಿಕೆ ನಡೆಸಲಾಯಿತು.ಶಿಬಿರ ನಡೆಯಿತ್ತ ಸಂದರ್ಭದಲ್ಲಿ ನೂತನ ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ ನೀಡಿದರು.

ಇವರನ್ನು ಗ್ರಾಮ ಪಂಚಾಯತಿ ವತಿಯಿಂದ ಅಭಿನಂದಿಸಲಾಯಿತು.ಬೆಂಗಳೂರಿನ ಚೈ ಲ್ಡ್ ರೈಟ್ ಟ್ರಸ್ಟ್ನ ಯೋಜನಾ ಸಹಾಯಕ ಕೌಶಿಕ್,ಫೀಲ್ಡ್ ಫೆಸಿಲಿಟೇಟರ್ ದಿವ್ಯ,ವರದಿಗಾರೆ ಹರಿಣಿ ಶಿಬಿರಾರ್ಥಿಗಳಲ್ಲಿ ಶಿಬಿರ ಅನುಭವದ ಬಗ್ಗೆ ಸಂವಾದ ನಡೆಸಿದರು.

ಶಿಬಿರದಲ್ಲಿ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವನಿತಾ ಸುವರ್ಣ ,ಸದಸ್ಯರಾದ ಕರುಣಾಕರ ಗೌಡ ಹುದೇರಿ,ಮೋನಪ್ಪ ಗೌಡ ,ಸುಂದರ ಗೌಡ ಶೇರ,ಶೀಲಾವತಿ ಗೋಳ್ತಿಲ,ಪುಷ್ಪಾವತಿ ಕುಕ್ಕಟ್ಟೆ ಶಿಬಿರದ ಉದ್ಘಾಟನೆ ಮತ್ತು ಸಮಾರೋಪ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಮಾರ್ಗದರ್ಶನ ನೀಡಿದರು.ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಹಕರಿಸಿದರು.ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸುಗಮಗಾರ ಶಿಬಿರ ಸಂಘಟಿಸಿದರು.ಒಂಬತ್ತು ದಿನಗಳ ಶಿಬಿರವು ಶನಿ‌ವಾರ ಸಂಪನ್ನಗೊಂಡಿತು.