ಸುಳ್ಯದಲ್ಲಿ ಕಿವಾನಿ ಇಂಟರ್ ನ್ಯಾಶನಲ್ ಗ್ರೂಪ್ ರವರ “ಬೆಳಕು” ಕಚೇರಿಯ ಉದ್ಘಾಟನಾ ಸಮಾರಂಭ

0

ಅಶಕ್ತ ವಿಕಲಚೇತನರಿಗೆ ಉದ್ಯೋಗವಕಾಶ ನೀಡಿ ಸಾಧಿಸುವ ಛಲ ಮೂಡಿಸಿ ಅವರ ಬದುಕಿನಲ್ಲಿ ಬೆಳಕು ಹರಿಸುವ ಸದುದ್ದೇಶ ಸಂಸ್ಥೆಯದ್ದಾಗಿದೆ : ಬಿ. ಸತ್ಯಮೂರ್ತಿ

ಸುಳ್ಯದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಿವಾನಿ ಇಂಟರ್ ನ್ಯಾಷನಲ್ ಗ್ರೂಪ್ ರವರ ವತಿಯಿಂದ ವಿಕಲಚೇತನ ಉದ್ಯೋಗಿಗಳಿಂದ ನಡೆಸಲ್ಪಡುವ ತಂತ್ರಜ್ಞರ ನೂತನ ಕಚೇರಿ “ಬೆಳಕು” ಮೇ.28 ರಂದು ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯ ದಾಮಿನಿ ಮೋಟಾರ್ಸ್ ಇದರ ನೆಲ ಅಂತಸ್ತಿನಲ್ಲಿ ಉದ್ಘಾಟನೆಗೊಂಡಿತು.
ಕಿವಾನಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಸತ್ಯಮೂರ್ತಿ ಬೆಂಗಳೂರು ಕಚೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಸುಳ್ಯ ಸಾಂದೀಪ ವಿಶೇಷ ಶಾಲೆಯ ಸ್ಥಾಪಕರಾದ ಎಂ.ಬಿ ಸದಾಶಿವ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ನೋಟರಿ ಹಿರಿಯ ನ್ಯಾಯವಾದಿ ನಳಿನ್ ಕುಮಾರ್ ಕೋಡ್ತುಗುಳಿ,ಸಮಾಜ ಸೇವಕ ಶೈಲೇಶ್ ಅಂಬೆಕಲ್ಲು,ಕಿವಾನಿ ಸಂಸ್ಥೆಯ ಹೆಚ್.ಆರ್ ರಾಜಣ್ಣ ಬೆಂಗಳೂರು ಉಪಸ್ಥಿತರಿದ್ದರು.


ಕಿವಾನಿ ಸಂಸ್ಥೆಯು ವಿಕಲಚೇತನರಿಗೆ ಸ್ಪೂರ್ತಿ ನೀಡಿ ಅವರಲ್ಲಿರುವ ಛಲ ಸಾಧನೆ ಹಾಗೂ ಧೃಢ ಗುರಿಯನ್ನು ಹೊರ ಚೆಲ್ಲುವಂತೆ ಪ್ರೋತ್ಸಾಹಿಸಿ ಸಮಾಜದಲ್ಲಿ ಸರ್ವ ಸಾಮಾನ್ಯರಂತೆ ಬದುಕಿ ಸಮಾಜಕ್ಕೆ ಅವರಿಂದ ಕೊಡುಗೆ ಸಿಗುವಂತಾಗಬೇಕು ಹಾಗೂ ಅವರ ಬಾಳಿನಲ್ಲಿ ಬೆಳಕು ಹರಿಸುವ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಜನಿಕಾಂತ್ ಉಮ್ಮಡ್ಕರವರು ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸಿದರು.


ನೂತನ ಬೆಳಕು ಸಂಸ್ಥೆಯಲ್ಲಿ ಐದು ಮಂದಿ ವಿಕಲಚೇತನರಿಗೆ ಉದ್ಯೋಗವಕಾಶ ನೀಡಲಾಯಿತು. ಕು.ನಿಶ್ಮಿತಾ ಪ್ರಾರ್ಥಿಸಿದರು. ರಜನಿಕಾಂತ್ ಸ್ವಾಗತಿಸಿದರು.
ಶ್ರೀಮತಿ ರಶ್ಮಿ ರಜನಿಕಾಂತ್ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಪೈಲಾರು ಅಮರ ಸಂಘಟನಾ ಸಮಿತಿಯ ಸದಸ್ಯರು ಸಹಕರಿಸಿದರು.