2023-24 ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಮೇ.31ರಂದು ಪ್ರಾರಂಭಗೊಂಡಿತು. ಶಾಲಾ ಶೈಕ್ಷಣಿಕ ಅವಧಿ ಮೇ.29ರಂದು ಆರಂಭಗೊಂಡು ಶಾಲೆಗಳು ತೆರೆಯಲಾಗಿತ್ತು. ಶಾಲಾ ತರಗತಿಗಳು ಮೇ.31 ರಿಂದ ಆರಂಭಗೊಂಡಿದೆ. ಇದರ ಅಂಗವಾಗಿ ಎಲ್ಲಾ ಶಾಲೆಗಳಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ ನಡೆಯಿತು.
ವಿದ್ಯಾರ್ಥಿಗಳನ್ನು ಸಂಭ್ರಮ ಸಡಗರದಿಂದ ಶಾಲೆಗೆ ಸ್ವಾಗತಿಸಿ ಬರ ಮಾಡಿಕೊಳ್ಳಲಾಯಿತು. ಶಾಲಾ ಆವರಣವನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು.ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಚೆಂಡೆ, ವಾದ್ಯ ಮೇಳದ ಜೊತೆ ಮಕ್ಕಳನ್ನು ಮೆರವಣಿಗೆಯಲ್ಲಿ ಸ್ವಾಗತಿಸಿ ಶಾಲೆಗೆ ಕರೆ ತರಲಾಯಿತು. ಶಾಲಾ, ಕೊಠಡಿಗಳು, ಶಾಲಾ ಆವರಣಗಳನ್ನು ಶೃಂಗರಿಸಲಾಯಿತು. ಸಿಹಿ ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು.
ಎಣ್ಮೂರಿನಲ್ಲಿ ತಾಲೂಕು ಮಟ್ಟದ ಪ್ರಾರಂಭೋತ್ಸವ
ಶಾಲಾ ಶಿಕ್ಷಣ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ದ.ಜಿ.ಪಂ.ಪ್ರೌಢ ಶಾಲೆ ಎಣ್ಮೂರು ಇವರ ನೇತೃತ್ವದಲ್ಲಿ
ಸುಳ್ಯ ತಾಲೂಕು ಮಟ್ಟದ ಪ್ರಾರಂಭೋತ್ಸವ ಎಣ್ಮೂರು ಪ್ರೌಢ ಶಾಲೆಯಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಮುರುಳ್ಯ ಗ್ರಾ.ಪಂ.ಅಧ್ಯಕ್ಷೆ ಜಾನಕಿ ಮುರುಳ್ಯ, ಸುಳ್ಯ ತಹಶಿಲ್ದಾರ್ ಜಿ.ಮಂಜುನಾಥ್, ಕಡಬ ತಹಶಿಲ್ದಾರ್ ರಮೇಶ್, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್ ಮತ್ತಿತರರು ಭಾಗವಹಿಸಿದ್ದರು.