ಕೆ.ವಿ.ಜಿ ಐ.ಪಿ.ಎಸ್ ನಲ್ಲಿ ಪರಿಸರ ದಿನಾಚರಣೆ

0

ಕೆ.ವಿ.ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜೂ.೫ರಂದು ಪರಿಸರ ದಿನವನ್ನಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಮಾಡಲಾಯಿತು. ಈ ಬಳಿಕ ಮಾತನಾಡಿದ ಶಾಲಾ ಪ್ರಾಂಶುಪಾಲರು ಅರುಣ್ ಕುಮಾರ್ ʻಪರಿಸರವನ್ನು ಉಳಿಸಿ ಬೆಳೆಸುವ ಜೊತೆಗೆ ಅದನ್ನು ಶುಚಿಯಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ʼ ಎಂದು ಹೇಳಿದರು. ತದನಂತರ ಮಾತನಾಡಿದ ಸಮಾಜ ವಿಜ್ಞಾನದ ಶಿಕ್ಷಕಿ ಶ್ರೀಮತಿ ರೋಹಿಣಿ ʻಈ ಒಂದು ದಿನ ಮಾತ್ರ ನಾವು ಪರಿಸರವನ್ನು ಉಳಿಸುವ ಕಾರ್ಯ ಕೈಗೊಳ್ಳುವುದಲ್ಲ ಪ್ರತಿನಿತ್ಯವೂ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವು ಕೈಗೊಳ್ಳಬೇಕುʼ ಎಂದು ಹೇಳಿದರು.


ಈ ಸಂದರ್ಭದಲ್ಲಿ ೧೦ನೇ ತರಗತಿಯ ವಿದ್ಯಾರ್ಥಿ ಗಳು ಪರಿಸರ ಸಂರಕ್ಷಣೆಯ ಕುರಿತು ವಿವಿಧ ಚಿತ್ರಗಳನ್ನು ಮಾಡಿ ಸೂಚನ ಫಲಕದಲ್ಲಿ ಪ್ರದರ್ಶಿಸಿದರು. ಬಳಿಕ ಶಾಲಾ ಶಿಕ್ಷಕ, ಶಿಕ್ಷಕೇತರ ವರ್ಗದವರಿಗೂ ಕೆ.ವಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳಿಗೂ ವಿವಿಧ ರೀತಿಯ ಗಿಡಗಳನ್ನು ಕೊಟ್ಟು ಸಂಭ್ರಮಿಸಿದರು.

ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ.ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು.

೧೦ನೇ ತರಗತಿಯ ವಿದ್ಯಾರ್ಥಿ ಗಳು ಕಾರ್ಯಕ್ರಮವನ್ನು ನಿರ್ವಹಿಸಿದರು ಹಾಗೂ ಜನನಿ ಮತ್ತು ಲಹರಿ ನಿರೂಪಿಸಿದರು. 
ಕಾರ್ಯಕ್ರಮ ಮುಗಿದ ಬಳಿಕ ೯ನೇ ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳು ಶಾಲಾ ಮುಂದಿರುವ ರಸ್ತೆಯನ್ನು ದುರಸ್ತಿ ಮಾಡುವ ಶ್ರಮದಾನವನ್ನು ಮಾಡಿದರು. ಶಾಲಾ ಸಾರಿಗೆ ಉಸ್ತುವಾರಿ ಮುದ್ದಪ್ಪರವರು ಹಾಗೂ ಚಾಲಕರು ಈ ಶ್ರಮದಾನಕ್ಕೆ  ಸಹಕರಿಸಿದರು.ಶಾಲಾ ಮೈದಾನದ ಆವರಣದಲ್ಲಿ ಗಿಡಗಳನ್ನು ನೆಟ್ಟು ಹಸಿರು ಉಳಿಸುವ ಘೋಷಣೆಯೊಂದಿಗೆ ಕಾರ್ಯಕ್ರಮವು ಸಮಾಪಣೆಗೊಂಡಿತು.