ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಇದರ ದ್ವಿತೀಯ ಪಿಯು ನಲ್ಲಿ ವಿಶಿಷ್ಠ ಶ್ರೇಣಿ ಪಡೆದ ಸಾಧಕರನ್ನು ಶಾಸಕಿ ಭಾಗೀರಥಿ ಮುರುಳ್ಯ ಸನ್ಮಾನಿಸಿ ಜೂ.16 ರಂದು ಗೌರವಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಪ್ರಾಚಾರ್ಯ ಸೋಮಶೇಖರ ನಾಯಕ್, ನಿವೃತ್ತ ಉಪನ್ಯಾಸಕ ಎ.ಮೋಹನ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವರಾಮ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಉಪಪ್ರಾಚಾರ್ಯೆ ರೇಖಾರಾಣಿ ಸೋಮಶೇಖರ್, ಕುಕ್ಕೆ ದೇವಳದ ಶಿವಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್ ಸ್ವಾಗತಿಸಿದರು. ಉಪನ್ಯಾಸಕಿ ಜ್ಯೋತಿ.ಪಿ.ರೈ ವಿಶಿಷ್ಠ ಶ್ರೇಣಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.ಉಪನ್ಯಾಸಕಿ ಸವಿತಾ ಕೈಲಾಸ್ ವಂದಿಸಿದರು. ಉಪನ್ಯಾಸಕಿ ಶೃತಿ ನಿರೂಪಿಸಿದರು.ಪ್ರಜ್ವಲ್.ಜೆ. ಪರಿಚಯಿಸಿದರು.ಉಪನ್ಯಾಸಕಿ ಜಯಪ್ರಕಾಶ್ ಆರ್ ಮತ್ತು ಪ್ರವೀಣ್.ಜೆ ಸಹಕರಿಸಿದರು.
ಸಮಾರಂಭದಲ್ಲಿ ೨೦೨೩-೨೪ನೇ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಪಡೆದು ಸಾಧನೆ ಮಾಡಿದ ೭೬ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪ್ರಸಾದ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ದಾಖಲೆಯ ಫಲಿತಾಂಶ ದಾಖಲಿಸಲು ಕಾರಣಕರ್ತರಾದ ಪ್ರಾಚಾರ್ಯರಿಗೆ ಸರ್ವ ಉಪನ್ಯಾಸಕರ ಪರವಾಗಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.ಇದೇ ಸಂದರ್ಭ ಶಾಸಕರಾಗಿ ಪ್ರಪ್ರಥಮ ಬಾರಿಗೆ ಕಾಲೇಜಿಗೆ ಆಗಮಿಸಿದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.