ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಜೂ.19 ರಂದು ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಶುಭಾರಂಭಗೊಂಡಿತು.
ಅಂಗಡಿಯನ್ನು ಕರಾವಳಿ ಕೊಕೋನೆಟ್ ಪೈಚಾರು ಇದರ ಮಾಲಕ ಅಬೂಬಕ್ಕರ್ ಬೊಳುಬೈಲು ಟೇಪ್ ತುಂಡರಿಸಿ
ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲರು ಕೆ. ಆರ್. ಗಂಗಾಧರ ಕುರುಂಜಿ ವಹಿಸಿದ್ದರು. ಅತಿಥಿಗಳಾಗಿ ಕೆ.ಪಿ.ಸಿ.ಸಿ. ವಕ್ತಾರರಾದ ಟಿ. ಎಂ. ಶಹೀದ್ ತೆಕ್ಕಿಲ್,ಅರಂತೋಡು ಪ್ರಾಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಜಾಲ್ಸೂರು ಗ್ರಾ. ಪಂ. ಸದಸ್ಯರಾದ ಮುಜೀಬ್ ಪೈಚಾರು, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷರಾದ ಹಾಜಿ ಉಮ್ಮರ್ ಪಿ. ಎ, ವಿದ್ಯಾಬೋಧಿನಿ ಬಾಳಿಲ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಜತ್ತಪ್ಪ ಮಾಸ್ತರ್, ರಬ್ಬರ್ ಉತ್ಪಾದಕರ ಸಂಘ ಆರಂತೋಡು ಇದರ ಅಧ್ಯಕ್ಷ ರಾದ ಶಶಿಕುಮಾರ್ ಎ. ಕೆ. ವೇದಿಕೆಯಲ್ಲಿದ್ದರು. ಸುದ್ದಿ ಬಿಡುಗಡೆ ಪ್ರತಿನಿಧಿ ತಾಜುದ್ದೀನ್ ಅರಂತೋಡು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ, ಇಂಡಿಯನ್ ಮಾರ್ಕೆಟಿಂಗ್ ಅರಂತೋಡಿನ ಹಂಝ ಬೊಳುಬೈಲು, ಕರ್ನಾಟಕ ರಬ್ಬರ್ ಮಾರ್ಕೆಟಿಂಗ್ ಪೈಚಾರ್ ನ ಸಂಶುದ್ದೀನ್, ಶಾರಿಕ್, ಅಬ್ದುಲ್ಲಾ, ನಿರಂಜನ, ಸಿರಾಜ್, ಮತ್ತಿತರರು ಉಪಸ್ಥಿತರಿದ್ದರು.
ಕರೋನಾ ಬಳಿಕ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಅರಂತೋಡು ಕೂಡ ಒಂದು. ಇಲ್ಲಿ ಹೊಸ ಸಂಸ್ಥೆ ಆರಂಭವಾಗಿದೆ.ಇದು ರೈತರಿಗೆ ಅನುಕೂಲವಾಗುವ ವ್ಯಾಪಾರ ನೀಡಲಿ. ನಾನೊಂದು ಸಹಕಾರ ಸಂಘದ ಅಧ್ಯಕ್ಷನಾಗಿ ನನ್ನ ಪ್ರಥಮ ಆದ್ಯತೆ ರೈತರಿಗೆ ಸಹಕಾರ ನೀಡುವುದು ಆಗಿದೆ. ಅದೇ ಉದ್ದೇಶ ನಿಮ್ಮದು ಆಗಿರಲಿ, ಉತ್ತಮ ಸೇವೆ ನೀಡುವಂತಾಗಲಿ.
: ಸಂತೋಷ್ ಕುತ್ತಮೊಟ್ಟೆ
ಈ ಭಾಗದಲ್ಲಿ ಪ್ರಥಮವಾಗಿ ರಬ್ಬರ್ ಬೆಳೆದವನು ನಾನು. ಈಗ ಅಡಿಕೆಗೆ ಕಾಯಿಲೆ ಬಂದಿದೆ ಆದ ಕಾರಣ ಕೃಷಿಕರಿಗರ ಸ್ವಲ್ಪ ಕಷ್ಟ ಆಗಿದೆ. ನೀವು ಹೊಸದಾಗಿ ಇಲ್ಲಿ ಆರಂಬಿಸಿರುವ ವ್ಯಾಪಾರದಲ್ಲಿ ತೂಕ ನಲ್ಲಿ ಪ್ರಾಮಾಣಿಕತೆ ಅತಿಯಾಗಿರಲಿ.
: ಜತ್ತಪ್ಪ ಮಾಸ್ತರ್
ಈ ಸಂಸ್ಥೆಯವರು ಒಳ್ಳೆಯ ಬಾಡಿಗೆ ನೀಡಿದ್ದಾರೆ ರೈತರಿಗೂ ಒಳ್ಳೆಯ ಬೆಲೆ ಕೊಡಲಿದ್ದಾರೆ ಅನ್ನುವ ವಿಶ್ವಾಸ ನನಗಿದೆ. ಗ್ರಾಹಕರೊಂದಿಗೆ ನಿಮ್ಮ ನಡೆವಳಿಕೆ ಪ್ರಮುಖವಾಗಿರಲಿ ಸ್ಪರ್ಧಾತ್ಮಕ ಧರ ನಿಮ್ಮದಾಗಿರಲಿ.
: ಟಿ. ಎಂ. ಶಹೀದ್
ಅರಂತೋಡು ಎಂಬುದು ಕೇಂದ್ರ ಸ್ಥಾನ. ನಾಲ್ಕು ಗ್ರಾಮದ ಜನ ಬರ್ತಾರೆ. ಹೊಸದಾಗಿ ಸೇರಿಕೊಂಡ ಈ ಸಂಸ್ಥೆಯಲ್ಲಿ ನಿಖರ ತೂಕ, ಉತ್ತಮ ಸೇವೆ ನೀಡುವಂತಾಗಲಿ. ಎಲ್ಲಾ ಕಾಡುತ್ಪತಿ ಖರೀದಿ ನಡೆಯಲಿ.
: ಕೆ.ಆರ್ ಗಂಗಾಧರ್