ಅನ್ಸಾರಿಯ ಎಜುಕೇಶನ್ ಸೆಂಟರ್ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ 27 ನೇ ವಾರ್ಷಿಕ ಮಹಾಸಭೆ

0


ಸುಳ್ಯ ನಾವೂರು ಜಟ್ಟಿಪಳ್ಳ ರಸ್ತೆಯಲ್ಲಿ ಕಾರ್ಯಚರಿಸುತ್ತಿರುವ ಸಂಸ್ಥೆ ಅನ್ಸಾರಿಯ ಎಜುಕೇಶನ್ ಸೆಂಟರ್ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ ಇದರ 27ನೇ ವಾರ್ಷಿಕ ಮಹಾಸಭೆ ಅನ್ಸಾರಿಯ ಎಜುಕೇಶನ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು.


ಸಯ್ಯದ್ ಕುಂಞಿ ಕೋಯ ತಂಙಳ್ ದುವಾಶಿರ್ವಚನ ಮಾಡಿ ಮಹಾಸಭೆಗೆ ಚಾಲನೆ ನೀಡಿದರು.
ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.


ಸಭೆಯ ಅಧ್ಯಕ್ಷ ಅನ್ಸಾರಿಯ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಅಬ್ದುಲ್‌ ಮಜೀದ್ ವಹಿಸಿದ್ದರು.
ಅನ್ಸಾರಿಯ ಮಸೀದಿ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ,ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಅನ್ಸಾರಿಯ ಸಲಹಾ ಸಮಿತಿ ಸದಸ್ಯ ಹಾಜಿ ಕೆ ಎಂ ಮುಸ್ತಫಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಅನ್ಸಾರಿಯ ಗಲ್ಪ್ ಸಮಿತಿಗಳ ಸಂಯೋಜಕ ಹಾಜಿ ಹಮೀದ್ ಎಸ್ ಎಂ,ಅನ್ಸಾರಿಯ ಶಾದಿಮಹಲ್ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್‌ ಖಾದರ್ ಹಾಜಿ ಪಟೇಲ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ‌ಹಾಜಿ ಶುಕೂರ್,ಗಾಂಧಿನಗರ ಜುಮ್ಮಾ ಮಸೀದಿ ನಿರ್ದೇಶಕ ಹಾಜಿ ಹಮೀದ್,ಸಲಹಾ ಸಮಿತಿ ಸದಸ್ಯರಾದ ಬಾಬಾ ಹಾಜಿ ಎಲಿಮಲೆ, ಹಾಜಿ ಐ ಇಸ್ಮಾಯಿಲ್, ಅನ್ಸಾರಿಯ ಉಪಾಧ್ಯಕ್ಷ ಹಾಜಿ ಹಸನ್ ಎ ಆರ್ ಟ್ರೇಡರ್ಸ್,ಅನ್ಸಾರಿಯ ದಹವಾ ಕಾಲೇಜು ಉಸ್ತುವಾರಿ ಹಮೀದ್ ಬೀಜಕೊಚ್ಚಿ, ಅನ್ಸಾರಿಯ ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕಾರ್ಯದರ್ಶಿಗಳಾದ ಶರೀಫ್ ಜಟ್ಟಿಪಳ್ಳ, ಶಾಫಿ ಕುತ್ತಮೊಟ್ಟೆ ವಾಚಿಸಿದರು.


ಮಹಾಸಭೆ ಕೊನೆಯಲ್ಲಿ ನೂತನ ಕಾರ್ಯಕಾರಿ ಸಮಿತಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅನ್ಸಾರಿಯ ವಿದ್ಯಾರ್ಥಿ ಮುಸ್ತಫಾ ಖಿರಾಹತ್ ಪಠಿಸಿದರು.
ಕಾರ್ಯದರ್ಶಿ ಕಮಾಲ್ ಮಾಂಬ್ಳಿ ಸ್ವಾಗತಿಸಿ ,ಅನ್ಸಾರಿಯ ವ್ಯವಸ್ಥಾಪಕ ಉವೈಸ್ ಕಾರ್ಯಕ್ರಮ ನಿರೂಪಿಸಿದರು.


ನೂತನ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಹಾಜಿ ಅಬ್ದುಲ್‌ ಮಜೀದ್ ಜನತಾ,ಹಸನ್ ಹಾಜಿ ಏ ಆರ್ ಟ್ರೇಡರ್ಸ್,ಲತೀಫ್ ಹರ್ಲಡ್ಕ, ಶಾಫಿ ಕುತ್ತಮೊಟ್ಟೆ, ಆದಂ ಹಾಜಿ ಕಮ್ಮಾಡಿ, ಹಮೀದ್ ಬೀಜಕೊಚ್ಚಿ,ಉಮ್ಮರ್ ಕೆ ಎಸ್,ಶರೀಫ್ ಕಂಠಿ,ಅಬ್ದುಲ್‌ ಕಲಾಂ ಬೀಜ ಕೊಚ್ಚಿ,ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ,ಅಬ್ದುಲ್‌ ಹಮೀದ್ ಜನತಾ, ಕೆ ಬಿ ಇಬ್ರಾಹಿಂ, ಸಿದ್ದೀಕ್ ಕಟ್ಟೆಕ್ಕಾರ್, ಹಾಜಿ ಅಬ್ದುಲ್‌ ಖಾದರ್ ಪಟೇಲ್, ಎಸ್ ಪಿ ಅಬೂಭಕ್ಕರ್, ಸಿದ್ದೀಕ್ ಕೊಕ್ಕೊ,ಕಮಾಲ್ ಮಾಂಬ್ಳಿ,ಶರೀಫ್ ಸುದ್ದಿ ಇವರನ್ನು ಆಯ್ಕೆ ಮಾಡಲಾಯಿತು.