ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಪದವಿನಂಗಡಿ, ಮಂಗಳೂರಿನಲ್ಲಿ ಪ್ರಥ್ವಿ ಚಾರಿಟೇಬಲ್ ಟ್ರಸ್ಟ್‌ನ ಸಹಕಾರದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಜೂ.15ರಂದು ನಡೆಯಿತು. ಕಾರ್ಯಕ್ರಮಕ್ಕೆ ದ. ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಚಾಲನೆ ನೀಡಿದರು. ಸುಮಾರು 25 ಹಣ್ಣಿನ ಗಿಡಗಳನ್ನು ಪದವಿನಂಗಡಿ ಪರಿಸರದ ಕೆ.ಹೆಚ್.ಬಿ ಕಾಲೋನಿ ಬೊಂದೆಲ್ ನಲ್ಲಿ ಮೈದಾನದ ಸುತ್ತ ನೆಡಲಾಯಿತು.