ರೋಟರಿ ಕ್ಲಬ್ ಸುಳ್ಯ ಪ್ರಾಯೋಜಿತ -ರೋಟರಿ ಚಾರಿಟೇಬಲ್ ಟ್ರಸ್ಟ್ ನ ೨೦೨೩-೨೪ ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಜು. ೦೭ ರಂದು ಟ್ರಸ್ಟ್ ನ ಕಚೇರಿಯಲ್ಲಿ ಟ್ರಸ್ಟ್ ನ ಚೇರ್ಮನ್, ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ – ರೊ. ಆನಂದ ಖಂಡಿಗರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿಯಾಗಿ/ ಸಂಚಾಲಕರಾಗಿ ರೊ.ಗಿರಿಜಾಶಂಕರ ತುದಿಯಡ್ಕ, ಖಜಾಂಜಿಯಾಗಿ ಡಾ. ಪುರುಷೋತ್ತಮ ಕೂಜುಗೋಡು ಕಟ್ಟೆಮನೆ ಅವಿರೋಧವಾಗಿ ಪುನರಾ ಯ್ಕೆಯಾದರು ಹಾಗೂ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಿರ್ಗಮಿತ ಛೇರ್ಮನ್ ರೊ. ಚಂದ್ರಶೇಖರ ಪೆರಾಲ್ ಮತ್ತು ಟ್ರಸ್ಟಿ ರೊ.ಬೆಳ್ಯಪ್ಪ ಗೌಡರನ್ನು ಗೌರವಿಸಿ ಬೀಳ್ಕೊಡಲಾಯಿತು. ನಂತರ ನಡೆದ ಸಭೆಯಲ್ಲಿ ಟ್ರಸ್ಟಿಗಳಾದ ರೊ.ಸೀತಾರಾಮ ರೈ ಸವಣೂರು ರೊ. ಗಿರಿಜಾ ಶಂಕರ್ ತುದಿಯಡ್ಕರವರ ಹೆಸರನ್ನು , ರೊ.ಪ್ರಭಾಕರ ನಾಯರ್ ರವರು ರೊ. ಡಾ. ಪುರುಷೋತ್ತಮ ಕೂಜುಗೋಡು ಕಟ್ಟೆಮನೆರವರ ಹೆಸರನ್ನು ಸೂಚಿಸಿ, ಟ್ರಸ್ಟಿಗಳಾದ ರೊ. ಮಹಾಲಕ್ಷ್ಮಿ ಕೊರಂಬಡ್ಕ ಹಾಗು ರೊ. ದಯಾನಂದ ಆಳ್ವರವರು ಅನುಮೋದಿಸಿದರು. ೧೯೮೦-೮೧ ರಿಂದ ರೋಟರಿ ಕ್ಲಬ್ ಸುಳ್ಳ್ಯ ಪ್ರಾಯೋಜಿತ ರೋಟರಿ ಚಾರಿಟೇಬಲ್ ಟ್ರಸ್ಟಿನ ಅಡಿಯಲ್ಲಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.