ಬೆಳ್ಳಾರೆಯ ಕೆಳಗಿನ ಪೇಟೆಯ ಕಾತ್ಯಾಯಿನಿ ಕಾಂಪ್ಲೆಕ್ಸ್ ನಲ್ಲಿ ಇಎ ಸ್ಪೆಷಲಿಸ್ಟ್ ಹಿತಾ ರೈ ಮತ್ತು ಸುದರ್ಶನ ಕೆ.ಎಸ್. ಮಾಲೀಕತ್ವದ ಮೂಕಾಂಬಿಕಾ ಪ್ರಿವೆಂಟಿವ್ ಹೆಲ್ತ್ ಲೇರ್ ವೆಲ್ ನೆಸ್ ಸೆಂಟರ್ ಜು. 10ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಪುರಾತನ ಕಾಲದಲ್ಲಿ ಇದ್ದಂತಹ ಅಂಗೈಯಲ್ಲಿ ಆರೋಗ್ಯ ಅನ್ನುವ (ನಾಡಿ ಶಾಸ್ತ್ರ) ಮಾತಿನ ಪ್ರಕಾರ ಅಂಗೈಯಲ್ಲಿರುವ ನಾಡಿಯನ್ನು ಎಲೆಕ್ಟ್ರೋ ಎಕ್ಯೂಪಂಚರ್ ಉಪಕರಣದ ಮೂಲಕ ಪರೀಕ್ಷಿಸಿ ನಿಖರವಾದ ದೇಹದ ಅಂಗಾಂಗಗಳ ಅವಸ್ಥೆಯನ್ನು 5% to 10% ಇರುವಾಗಲೇ ಪತ್ತೆಹಚ್ಚಿ ಅಂಗಾಂಗಗಳನ್ನು ಪರ್ಯಾಯ ವಿಜ್ಞಾನದ (Alternate Science) ಮುಖಾಂತರ ಸುವ್ಯವಸ್ಥೆಗೆ ತರಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.