ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ-ಓಪರೇಟಿವ್ ಸೊಸೈಟಿಯಿಂದ ಕೆ. ಬಿ.ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ

0

ಶ್ರೀ ರಾಮಕೃಷ್ಣ ಕ್ರೆಡಿಟ್‌ಕೋ-ಓಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವತಿಯಿಂದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ತಿಳಿಸಿದ್ದಾರೆ.

ಸಂಘದಸದಸ್ಯರ ಮಕ್ಕಳಿಗೆ ೨೦೨೨-೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೯೦ ಹಾಗೂ ಅದಕ್ಕಿಂತ ಹೆಚ್ಚು ಅಂಕ ಮತ್ತು ದ್ವಿತೀಯಪಿ.ಯು.ಸಿ ಪರೀಕ್ಷೆಯಲ್ಲಿಶೇ. ೮೫ ಹಾಗೂ ಅದಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ಪ್ರತಿಭಾ ಪುರಸ್ಕಾರಕ್ಕೆಅರ್ಜಿಆಹ್ವಾನಿಸಲಾಗಿದೆ.

ಪ್ರತಿಭಾ ಪುರಸ್ಕಾರದ ಅರ್ಜಿಗಳು ಶ್ರೀ ರಾಮಕೃಷ್ಣಕ್ರೆಡಿಟ್‌ಕೋ-ಓಪರೇಟಿವ್ ಸೊಸೈಟಿಯಎಲ್ಲಾ ಶಾಖೆಗಳಲ್ಲಿ ಮತ್ತು ಸಂಘದಅಧಿಕೃತ ವೆಬ್‌ಸೈಟ್ http://ramakrishnacredit.com/ ನಲ್ಲಿ ಲಭ್ಯವಿದ್ದು ಜುಲೈ 31, ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸದಸ್ಯರು ಇದರ ಸದುಪಯೋಗ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.