ಭತ್ತದ ಬೆಳೆ ವಿಮೆ ಪಾವತಿಸಲು ಆ.16 ಕೊನೆ ದಿನ

0

ಸುಳ್ಯ ಕೃಷಿ ಇಲಾಖೆ ಮಾಹಿತಿ

2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆ ವಿಮೆ ಯೋಜನೆಯಡಿ ಗಾಮ ಪಂಚಾಯತ್‌ ಮಟ್ಟಕ್ಕೆ ಒಳಗೊಂಡ ಬೆಳೆಗಳು, ಹೆಕ್ಟೇರ್‌ವಾರು ಗರಿಷ್ಟ ವಿಮೆ ಮಾಡಬಹುದಾದ ಮೊತ್ತ, ವಿಮಾ ಕಂತಿನ ಮೊತ್ತ, ಪ್ರಸ್ತಾವನೆ ಸಲ್ಲಿಸುವ ವಿಧಾನಗಳ ಬಗ್ಗೆ ಸರಕಾರ ಅಧಿಸೂಚನೆ ಹೊರಡಿಸಿದೆ.

ಭತ್ತ (ಮಳೆಯಾಶ್ರಿತ) ಬೆಳೆಗೆ ಮಾತ್ರ ವಿಮೆ ಮಾಡಬಹುದಾಗಿದ್ದು ಇತರ, ಯಾವುದೇ ಬೆಳೆಗಳಿಗೆ ಕಾರ್ಯಕ್ಷೇತ್ರದಲ್ಲಿ ವಿಮೆ ಮಾಡುವಂತಿಲ್ಲ, ಬೆಳೆ ಸಾಲ ಮಂಜೂರಾದ ಎಲ್ಲಾರಿಗೂ ವಿಮೆ ಕಡ್ಡಾಯ ಹಾಗೂ ರೂತರು ವಿಮಾ ಯೋಜನೆ ದಾಖಲಾತಿಗೆ ಕಡ್ಡಾಯವಾಗಿ ಪುಟ್ಸ್ ಐಡಿ(ಎಫ್‌ಐಡಿ)ಹೊಂದಿರಬೇಕು.

ಸಾಲಗಾರ ರೈತರು ಬೆಳೆ ವಿಮೆ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಿ ಯೋಜನೆಯಿಂದ ಹೊರತಾಗಬಹುದು. ಬೆಳೆ ಸಾಲ ಪಡೆದಿರುವ ರೈತರು ಬೆಳೆ ವಿಮೆ ಮಾಡುವುದಿದ್ದಲ್ಲಿ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬೆಳೆ ವಿಮೆ, ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಶೀದಿಯನ್ನು ನೀಡಿ ಪೂರ್ಣ ವಿಮಾ ಮೊತ್ತವನ್ನು ಪಾವತಿಸುವುದು. ಬೆಳೆ ಬೆಳೆಸದೆ ಇರುವವರು ವಿಮೆಗೆ ಅರ್ಹರಲ್ಲವೆಂಬುದನ್ನು ಹಾಗೂ ಈ ಯೋಜನೆಯನ್ನು ದುರುಪಯೋಗ ಪಡಿಸಲು ಅವಕಾಶ ನೀಡಕೂಡದು.

ಸಾಲಗಾರರು ಮತ್ತು ಸಾಲಗಾರರಲ್ಲದ ರೈತರ ವಿಮಾ ಕಂತಿನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ ರೈತರು ಬೆಳೆ ವಿಮೆ ಪ್ರಸ್ತಾವನೆ ಸಲ್ಲಿಸಲು ಅಂತಿಮ ದಿನ ಆಗಸ್ಟ್ 16 ಭತ್ತ(ಮಳೆ ಆಶ್ರಿತ), ವಿಮಾ ಮೊತ್ತ 63,750 ರೂ. ಆಗಿದ್ದು ರೈತರು ಒಂದು ಎಕ್ರೆಗೆ 516 ರೂ. ವಿಮಾ ಕಂತು ಪಾವತಿಸಬೇಕಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು, ಸುಳ್ಯ ತಾಲೂಕು ಇವರು ಪ್ರಕಟಣೆ ತಿಳಿಸಿದೆ.