ಸುಳ್ಯ ಇನ್ನರ್ ವೀಲ್ ಕ್ಲಬ್ ಪದಪ್ರದಾನ

0

ಶ್ರೀಮತಿ ಸವಿತಾ ನಾರ್ಕೋಡು ತಂಡ ಅಧಿಕಾರ ಸ್ವೀಕಾರ

ಸುಳ್ಯ ಇನ್ನರ್ ವೀಲ್ ಕ್ಲಬ್ ನೂತನ ಅಧ್ಯಕ್ಷೆ ಸವಿತಾ ನಾರ್ಕೋಡು ತಂಡದ ಪದಪ್ರದಾನ ಸಮಾರಂಭ ಜು.13ರಂದು ಸಂಜೆ ಸುಳ್ಯದ ರಥಬೀದಿಯಲ್ಲಿರುವ ರೋಟರಿ ಕಮ್ಯೂನಿಟಿ ಸಭಾಂಗಣದಲ್ಲಿ ನಡೆಯಿತು.

ಕ್ಲಬ್ ನ ಪೂರ್ವಾಧ್ಯಕ್ಷೆ ಸುಧಾ ಶ್ರೀಧರ್ ರವರು ನೂತನ ಪದಾಧಿಕಾರಿಗಳಿಗೆ ಪಿನ್ ತೊಡಿಸುವ ಮೂಲಕ ಪ್ರದಪ್ರಧಾನ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಜಿಲ್ಲೆ 3 1 8 ಇದರ ಸಿಜಿಆರ್ ಆಗಿರುವ ಡಾ. ಭಾರತಿ ಪ್ರಕಾಶ್ ಹಾಗೂ ಜಿಲ್ಲೆ 318 ಇದರ ಖಜಾಂಜಿ ರಜನಿ ಭಟ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪೈಂಬೆಚಾಲು ಅಂಗನವಾಡಿ ಕೇಂದ್ರಕ್ಕೆ ಗೋದ್ರೆಜ್ ಹಾಗೂ ಬೊಳಿಯಮಜಲಿನ ಅಸಕ್ತ ಕುಟುಂಬಕ್ಕೆ ಧನ ಸಹಾಯ ಮಾಡಲಾಯಿತು.
ಸಭೆಯು ಅಧ್ಯಕ್ಷೆ ನಯನ ಹರಿಪ್ರಸಾದ್ ರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಪದಪ್ರಧಾನದ ಬಳಿಕ ನೂತನ ಅಧ್ಯಕ್ಷೆ ಸವಿತಾ ನಾರ್ಕೋಡುರ ಅಧ್ಯಕ್ಷತೆಯಲ್ಲೊ ಸಭೆ ಮುಂದುವರಿಯಿತು.


ವೇದಿಕೆಯಲ್ಲಿ ಪೂರ್ವ ಅಧ್ಯಕ್ಷೆ ಪೂಜಾ ಸಂತೋಷ್, ಕಾರ್ಯದರ್ಶಿ ಚಿಂತನ ಸುಬ್ರಮಣ್ಯ, ಕೋಶಾಧಿಕಾರಿ ಡಾ ಸವಿತಾ ಸಿ ಕೆ, ಯೋಗಿತಾ ಗೋಪಿನಾಥ್, ಜಯಲಕ್ಷ್ಮಿ ಜೆ ರೈ, ಮಮತ ಮಡ್ತಿಲ, ಕೃಪಾ ಚಂದ್ರಶೇಖರ್, ಲತಾ ರೈ ಮಮತ ನಾರ್ಕೋಡು, ಡಾ ಪ್ರಜ್ಞಾ ಮನುಜೇಶ್ ಉಪಸ್ಥಿತರಿದ್ದರು ವರ್ಷದ ಬುಲೆಟಿನ್ ಇನ್ನರ್ ಸ್ಫೂರ್ತಿಯನ್ನು ರೋಟರಿ ಅಧ್ಯಕ್ಷ ಆನಂದ ಖಂಡಿಗ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮವನ್ನು ಜಯಮಣಿ ಮಾಧವ, ಮೀರಾ ಮುರಳೀಧರ ರೈ, ಡಾ ಹರ್ಷಿತ ಪುರುಷೋತ್ತಮ್ ನಡೆಸಿಕೊಟ್ಟರು.