೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜು. ರಂದು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೯ನೇ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರ್ ವತಿಯಿಂದ ನಡೆಸಲ್ಪಡುವ ಅಮರ ಯೋಗ ಕೇಂದ್ರ ದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು.
ವಿದ್ಯಾರ್ಥಿಗಳಾದ ಕು. ಜಿಶಾ ಕೊರಂಬಡ್ಕ, ಕು.ರಮಿಕ್ಷ ಮಿನಾಜೆ, ಕು.ರೇಷ್ಮಾಮಾಡಬಾಕಿಲು, ಕು ಹವೀಕ್ಷ ಯಸ್. ಆರ್., ಕು.ಖುಷಿ ಕೊಪ್ಪತಡ್ಕ, ಕು.ನಿಹಾನಿ ವಾಲ್ತಾಜೆ,
ಮಣಿ ಪ್ರಕಾಶ್ ಕಡೋಡಿ ಮತ್ತು ಯೋಗ ಸ್ಪರ್ಧೆಯಲ್ಲಿ ಹಲವಾರು ದಾಖಲೆ ನಿರ್ಮಾಣದ ಯೋಗ ಗುರು ಶರತ್ ಮರ್ಗಿಲಡ್ಕ ಅವರನ್ನು ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ಶರತ್ ಮರ್ಗಿಲಡ್ಕ ಯೋಗ ಶಿಕ್ಷಣ ನೀಡಿದ್ದಾರೆ.
ಈ ಸಂದರ್ಭದಲ್ಲಿ, ನಿವೃತ್ತ ಯೋಧ ಮಹೇಶ್ ಕೊಪ್ಪತಡ್ಕ, ಜಯರಾಮ್ ಅಡ್ಡನಪಾರೆ, ವಿನಯ್ ಮಾಡಬಾಕಿಲು, ಅರುಣ್ ಗೌಡ, ಕೇಶವ ಕೊರಂಬಡ್ಕ, ಸಾವಿತ್ರಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.