ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳ ಸಂಖ್ಯೆ ಮತ್ತು ವ್ಯಾಪ್ತಿ ನಿರ್ಣಯ : ನಾಳೆ ರಾಜಕೀಯ ಪಕ್ಷಗಳ ಸಭೆ

0

ಸುಳ್ಯ ತಾಲೂಕಿನ ಜಿ.ಪಂ. ಮತ್ತು ತಾ.ಪಂ. ಚುನಾಯಿತ ಸದಸ್ಯರ ಸಂಖ್ಯೆ ಮತ್ತು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಣಯ ಮಾಡಲು
ಜು. 21 ರಂದು ರಾಜಕೀಯ ಪಕ್ಷಗಳ ಸಭೆ ಕರೆಯಲಾಗಿದೆ.

ದ.ಕ. ಜಿಲ್ಲೆಯ ಜಿ.ಪಂ. ಮತ್ತು ತಾ.ಪಂ.ಗಳ ಸೀಮಾ ನಿರ್ಣಯದ ಆಧಿಸೂಚನೆಗಳನ್ನು ಹಿಂಪಡೆಯಲಾಗಿರುವ ಹಿನ್ನಲೆಯಲ್ಲಿ ಜಿ.ಪಂ. ಮತ್ತು ತಾ.ಪಂ. ಸದಸ್ಯರ ಸಂಖ್ಯೆ ಮತ್ತು ಸೀಮಾ/ಗಡಿ ನಿರ್ಣಯವನ್ನು ರಚಿಸಿ, ತಾಲೂಕಿನ ಸಾರ್ವಜನಿಕರು ಮತ್ತು ಸ್ಥಳೀಯ ಪ್ರತಿನಿಧಿಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸುಳ್ಯ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ.


ಪರಿಷ್ಕೃತ ನಕಾಶೆಯೊಂದಿಗೆ ಏಳು ದಿನಗಳೊಳಗೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಸಲ್ಲಿಸಬೇಕೆಂದು ನ್ಯಾಯಾಲಯವು ಅಧಿಸೂಚನೆ ಹೊರಡಿಸಿರುವುದರಿಂದ ಸ್ವತಃ ತಹಶೀಲ್ದಾರರು ವೈಯಕ್ತಿಕ ಗಮನ ಹರಿಸಿ ಕ್ರಮ ಕೈಗೊಂಡು, ಪ್ರಸ್ತಾವನೆ ತಯಾರಿಸಿ ಜು. 24 ರ ಒಳಗಾಗಿ ಕಚೇರಿಗೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.


ಈ ಹಿನ್ನೆಲೆಯಲ್ಲಿ ಜಿ.ಪಂ. ಮತ್ತು ತಾ.ಪಂ. ಸದಸ್ಯ ಸಂಖ್ಯೆಯನ್ನು ಪರಿಷ್ಕೃತ ಮಾರ್ಗಸೂಚಿಗಳನುಸಾರ ಚುನಾಯಿತ ಸದಸ್ಯರ ಸಂಖ್ಯೆ ಮತ್ತು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಣಯಿಸಲು ಜು. 21ರಂದು ಪೂರ್ವಾಹ್ನ 10.30 ಕ್ಕೆ ತಾಲೂಕು ಆಡಳಿತ ಸೌಧ ತಾಲೂಕು ಕಚೇರಿಗಳ ಸಂಕೀರ್ಣ ಸುಳ್ಯ ಇದರ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ತಹಶೀಲ್ದಾರ್ ಕರೆದಿದ್ದಾರೆ.