ಬಾಂಜಿಕೋಡಿಯಲ್ಲಿ ವಿದ್ಯುತ್ ಸಮಸ್ಯೆ

0

ವಾರದಿಂದ ಪಂಚಾಯತ್ ಕುಡಿಯುವ ನೀರು ಸರಬರಾಜು ಸ್ಥಗಿತ

ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ವಿದ್ಯುತ್ ಸಮಸ್ಯೆಯಿಂದ ಪಂಚಾಯತ್ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ.
ವಿದ್ಯುತ್ ಕಂಬದಲ್ಲಿ ಮರದ ಗೆಲ್ಲು, ಬಳ್ಳಿ ಗಳು ಹಬ್ಬಿಕೊಂಡಿದ್ದು ವಿದ್ಯುತ್ ಸಮಸ್ಯೆಗೆ ಕಾರಣವಾಗಿರುವುದಾಗಿ ತಿಳಿದು ಬಂದಿದೆ.
ಮೆಸ್ಕಾಂ ಇಲಾಖೆಯವರು ಕೂಡಲೇ ಸ್ಪಂದಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.