ಕಾರ್ಮಿಕರ ಮೂಲಭೂತ ಬೇಡಿಕೆ ಈಡೇರಿಸಿದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರಿಗೆಕೆ.ಎಫ್.ಡಿ.ಸಿ.ವರ್ಕರ್ಸ್ ಫೆಡರೇಷನ್ ವತಿಯಿಂದ ಅಭಿನಂದನೆ

0

ಕೆ.ಎಫ್.ಡಿ.ಸಿ.ರಬ್ಬರ್ ವಿಭಾಗದಲ್ಲಿ ಕೆಲಸ ನಿರ್ವಹಿಸಿಕೊಂಡು ಬರುತ್ತಿರುವ ಕಾರ್ಮಿಕರು ಮೂಲ ಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು ಸುಮಾರು 10 ಅವಶ್ಯಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಸಕಿ ಕು. ಭಾಗೀರಥಿ ಮುರುಳ್ಯ ರವರಿಗೆ ಮನವಿ ನೀಡಿದ್ದರು.

ಇದರ ಬಗ್ಗೆ ಮುತುವರ್ಜಿ ವಹಿಸಿದ ಶಾಸಕರು ಕೆ.ಎಫ್.ಡಿ.ಸಿ ಎಂ.ಡಿ.ಯವರೊಂದಿಗೆ ಮಾತುಕತೆ ನಡೆಸಿದ್ದರು.

ಕಾರ್ಮಿಕರ ಬೇಡಿಕೆಯನ್ನು ಈಡೇರಿಸುವ ಸಲುವಾಗಿಶಾಸಕರ ನೇತೃತ್ವದಲ್ಲಿ ಜು.20 ರಂದು ಸಭೆ ನಡೆಸಿದರು. ಈ ಸಂದರ್ಭದಲ್ಲಿ 2021 ರ ಅಗಸ್ಟ್ ತಿಂಗಳಲ್ಲಿ ಕಾರ್ಮಿಕರ ಸಂಘಟನೆ ಮತ್ತು ಆಡಳಿತ ವರ್ಗದ ನಡುವೆ ಮಾಡಿಕೊಂಡ ಒಪ್ಪಂದದ ಪ್ರಕಾರ 3 ವರ್ಷಗಳ ದಿನವೊಂದರ ವೇತನದಲ್ಲಿ ವ್ಯತ್ಯಾಸ ವಿ.ಡಿ.ಎ
ರೂ.11.05, ರಬ್ಬರ್ ವಿಭಾಗದ ಕಾರ್ಮಿಕರಿಗೆ ಇ.ಎಸ್.ಐ ಸೌಲಭ್ಯ, ಬಾಕಿ ಉಳಿಕೆಯಾದ ಮೆಡಿಕಲ್ ಬಿಲ್ಲುಗಳು, ಅರಣ್ಯ ಸಚಿವರು ಈಶ್ವರ ಬಿ. ಖಂಡ್ರೆಯವರ ಶಿಫಾರಸ್ಸಿನಂತೆ

2021-2022ನೇ ಸಾಲಿನ 11.67% ಬೋನಸ್, ಕಳೆದ ವರ್ಷ ಮಳೆಗಾಲದಲ್ಲಿ 6 ರಿಂದ 9 ದಿನಗಳ ಕಡಿತ ಮಾಡಿದ ವೇತನ, ನಿರಂತರ ಕಾರ್ಮಿಕರ ಮನೆಗಳಿಗೆ ಸುಣ್ಣ- ಬಣ್ಣ , ಮೇಸ್ತ್ರಿಗಳಿಗೆ ಉದ್ಯೋಗ, ವ್ಯತ್ಯಾಸ ವೇತನ ರೂ.100.00, ನಿರಂತರ ಕಾರ್ಮಿಕರನ್ನು ಖಾಯಂಗೊಳಿಸುವುದು, ಕೊರೊನಾ ಸೀಲ್ ಡೌನ್ ಸಮಯದ ವೇತನ , 2022-2023ನೇ ಸಾಲಿನ 20% ಬೋನಸ್ , ದೀಪಾವಳಿ ಹಬ್ಬದ ಮುಂಗಡ ರೂ.6000/- ಪಾವತಿ ಮಾಡುವಂತೆ ಸಲ್ಲಿಸಿದ ಸುಮಾರು 10 ಬೇಡಿಕೆಗಳನ್ನು ಈಡೇರಿಸುವಲ್ಲಿ ಸ್ಪಂದಿಸಿದ ಕೆ.ಎಫ್.ಡಿ.ಸಿ.

ಎಂ.ಡಿ ಶ್ರೀಮತಿ ರಾಧಾದೇವಿ ಯವರನ್ನು ಹಾಗೂ ಶಾಸಕಿ ಕು.ಭಾಗೀರಥಿ ಮುರುಳ್ಯ ರವರನ್ನು ಕಾರ್ಮಿಕರ ಸಂಘಟನೆ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ತಿರುಮುರ್ತಿ, ಕಾರ್ಯಾಧ್ಯಕ್ಷ ತಂಗವೇಲು, ಪ್ರಧಾನ ಕಾರ್ಯದರ್ಶಿ ಶಂಕರಲಿಂಗಮ್, ಖಜಾಂಜಿ ನಟರಾಜ್ , ಸದಸ್ಯರುಗಳಾದ ಸುಬ್ಬಯ್ಯ ಬೆಂಗಮಲೆ, ಷಣ್ಮುಗಂ ಕಲ್ಲುಗುಂಡಿ, ಸೆಲ್ವರಾಜ್, ವೆಂಕಟೇಶ್ವರನ್, ಬಾಲಸುಬ್ರಹ್ಮಣ್ಯಂ ಮತ್ತು ಪ್ರಮುಖರಾದ ಹರೀಶ್ ರೈ ಉಬರಡ್ಕ , ರಾಜೇಂದ್ರ ಎಣ್ಮೂರು, ಪ್ರಸಾದ್ ಕಡಬ, ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.