ಮಕ್ಕಳನ್ನು ರಂಜಿಸಿದ ಖ್ಯಾತ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ
ಕೋಲ್ಚಾರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಿಂಗಳ 2 ಶನಿವಾರದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಂದ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳ ತರಬೇತಿ ನೀಡುವ ವಿನೂತನ “ಪ್ರೇರಣಾ” ಕಾರ್ಯಕ್ರಮಕ್ಕೆ ಜು.22 ರಂದು ಚಾಲನೆ ನೀಡಲಾಯಿತು.
ಸುಳ್ಯ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ಸುದರ್ಶನ ಪಾತಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ನಿವೃತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನಾಗವೇಣಿ ಕೊಯಿಂಗಾಜೆ ಶುಭ ಹಾರೈಸಿದರು.
ಸುಳ್ಯದ ಖ್ಯಾತ ಮಿಮಿಕ್ರಿ ಪಟು, ಹಾಸ್ಯ ಕಲಾವಿದ ಪಟ್ಟಾಭಿರಾಮ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಿಮಿಕ್ರಿ, ನೆರಳು ಬೆಳಕಿನಾಟ ಹಾಗೂ ಹಾಸ್ಯದ ಹೊನಲನ್ನು ಹರಿಸಿ ಮಕ್ಕಳನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಎಸ್ .ಡಿ. ಎಂ. ಸಿ ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ ಕೊಯಿಂಗಾಜೆ, ಸದಸ್ಯರಾದ ಜಗದೀಶ್ ಕೂಳಿಯಡ್ಕ, ಶ್ರೀಮತಿ ವಿನೋದ ಕುಮಾರಿ, ಶ್ರೀಮತಿ ಅಶ್ವಿತಾ ಕಣಕ್ಕೂರು, ಅಂಗನವಾಡಿ ಶಿಕ್ಷಕಿ ಶ್ರಿಮತಿ ರತ್ನಾವತಿ ವಾಲ್ತಾಜೆ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ನವಜ್ಯೋತಿ ಯುವಕ ಮಂಡಲ ಅಧ್ಯಕ್ಷ ಕಮಲಾಕ್ಷ ಕೊಯಿಂಗಾಜೆ, ಆಶಾ ಕಾರ್ಯಕರ್ತೆ ಶ್ರೀಮತಿ ಶಾಲಿನಿ ಪರಮಂಡಲ, ಶ್ರೀಮತಿ ಆಶಾ ಕೊಲ್ಚಾರ್,ಶ್ರೀಮತಿ ಪಲ್ಲವಿ ಪಾತಿಕಲ್ಲು, ಶ್ರೀಮತಿ ಪ್ರಶಿತಾ ಕೊಲ್ಲರ ಮೂಲೆ, ಪ್ರಸನ್ನ ಕೊಯಿಂಗಾಜೆ, ನಿತೀಶ್ ಕೋಲ್ಚಾರು, ಅಜೀತ್ ಕೂರ್ನಡ್ಕ, ಶಿವಪ್ರಸಾದ್ ಕೆ ವಿ ಕೋಲ್ಚಾರ್, ಶ್ರೀಮತಿ ಪವಿತ್ರ ಪಾಲಾರು, ಶ್ರೀಮತಿ ಪ್ರಮೀಳಾ ಹೊಸಗದ್ದೆ, ಶ್ರಿಮತಿ ಸೌಮ್ಯ ಕೊಯಿಂಗಾಜೆ, ಶ್ರಿಮತಿ ಭಾರತಿ ಕುಂಭಕೋಡು, ಶ್ರೀಮತಿ ಚಂಚಲಾಕ್ಷಿ ಹಾಸ್ಪಾರೆ, ಶಿಕ್ಷಕಿ ಶ್ರೀಮತಿ ಮಮತಾ ಕೆ.ವಿ , ಶ್ರೀಮತಿ ವಿನುತಾ ಕೋಲ್ಚಾರು, ಅಡುಗೆ ಸಿಬ್ಬಂದಿ ಶ್ರೀಮತಿ ಶೀಲಾ ಕೊನ್ನೊಡಿ, ಲೋಕೇಶ್ವರಿ ಕೋಲ್ಚಾರು ಉಪಸ್ಥಿತರಿದ್ದರು. ವಿದ್ಯಾರ್ಥಿನಿತಿಕ್ ಬಿ.ಹೆಚ್.ಪ್ರಾರ್ಥಿಸಿದರು.
ಶಿಕ್ಷಕಿ ಶ್ರಿಮತಿ ಜಲಜಾಕ್ಷಿ ಸ್ವಾಗತಿಸಿದರು. ಶಿಕ್ಷಕ ರಂಗನಾಥ ಎಂ. ಎಸ್ ವಂದಿಸಿದರು.