ಪಂಜದಲ್ಲಿ ಬಿ.ಎಂ.ಎಸ್ ಸ್ಥಾಪನ ದಿನಾಚರಣೆ

0

ಪಂಜ ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಬಿ.ಎಂ.ಎಸ್ ಸ್ಥಾಪನ ದಿನಾಚರಣೆಯನ್ನು ಜು.23 ರಂದು
ಸಂಪ್ರೀತಿ ಆಟೋ ರಿಕ್ಷಾ ನಿಲ್ದಾಣದಲ್ಲಿ ಆಚರಿಸಲಾಯಿತು. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಮನೋಹರ ಕಾರ್ಜ ಅಧ್ಯಕ್ಷತೆ ವಹಿಸಿದ್ದರು.ಜೀನತ್ ಚೀಮುಳ್ಳು ಸ್ವಾಗತಿಸಿದರು. ದೇವಪ್ಪ ಎಚ್ ರವರು ಸಿಹಿ ತಿಂಡಿ ವಿತರಿಸಿದರು.

ರಾಮಚಂದ್ರ ಬೀದಿಗುಡ್ಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಂಚಶ್ರೀ ಆಂಬುಲೆನ್ಸ್ ಚಾಲಕ ಉದಯ ಪಲ್ಲೋಡಿ , ಬಿ .ಎಂ .ಎಸ್ ಘಟಕದ ಸದಸ್ಯರು ಉಪಸ್ಥಿತರಿದ್ದರು.

ನವೀನ್ ಅಡಿಲು ಶುಭ ಹಾರೈಸಿದರು . ಕಾರ್ಯದರ್ಶಿ ನಾಗೇಶ್ ಕುಳ್ಳಾಜೆ ವಂದಿಸಿದರು.