ರೀಜಿನಲ್ ಮತ್ತು ರೇಂಜ್ ವ್ಯಾಪ್ತಿಯ ಮದ್ರಸಗಳಿಂದ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಕರ್ನಾಟಕ ರಾಜ್ಯ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್ ಎಂ ಎ)ಬೆಳ್ಳಾರೆ ಝೋನಲ್ ಸಮಿತಿ ವತಿಯಿಂದ ಬೃಹತ್ ವಿದ್ಯಾರ್ಥಿ ಸಂಗಮ ಸುಳ್ಯದ ನಾವೂರು ಅನ್ಸಾರಿಯಾ ಎಜುಕೇಶನ್ ಸೆಂಟರ್ ಸಭಾಂಗಣದಲ್ಲಿ ಜುಲೈ 23ರಂದು ನಡೆಯಿತು.
ಅಸ್ಸಯ್ಯಿದ್ ಕುಂಞಿಕೊಯ ತಂಙಳ್ ಸಅದಿ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಝೋನಲ್ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಬೀಡು ವಹಿಸಿದ್ದರು.
ಸ್ಥಳೀಯ ಮಸೀದಿ ಖತೀಬರಾದ ಉಮರ್ ಮುಸ್ಲಿಯಾರ್ ಮರ್ದಾಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಮುಖ್ಯ ಅಂಗವಾಗಿ ಸಂಪನ್ಮೂಲ ವ್ಯಕ್ತಿಗಳಾದ ಅಧ್ಯಾಪಕರಾದ ಸೂಫಿ ಮಾಸ್ಟರ್, ಬದ್ರುದ್ದೀನ್ ಅಹಸನಿ ಕೊಳಕೆ, ಶಫೀಕ್ ಮಾಸ್ಟರ್ ತಿಂಗಳಾಡಿ ಇವರುಗಳಿಂದ ವಿದ್ಯಾರ್ಥಿಗಳಿಗೆ ಕೆಡುಕಿನ ಬಗ್ಗೆ ಜಾಗೃತಿ,ಸುನ್ನತ್ ಜಮಾತಿನ ಮಹತ್ವ, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಎಂಬ ವಿಷಯಗಳ ಕುರಿತು ಮಾಹಿತಿ ಅರಿವು ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಗಮ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕರಿಸಿದ ಸಮಿತಿಯ ಪದಾಧಿಕಾರಿ ಅಬ್ದುಲ್ ಲತೀಫ್ ಅರ್ಲಡ್ಕ, ಹಾಗೂ ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕಾಜೂರು ರವರನ್ನು ಸಂಘಟನೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಕೆಎಂಜೆ ಸುಳ್ಯ ಸರ್ಕಲ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್ಎಂಎ ಮುಖಂಡರಾದ ಇಸ್ಮಾಯಿಲ್ ಹಾಜಿ ಬೈತಡ್ಕ, ಎಸ್ ಜೆ ಎಂ ರಾಜ್ಯ ಸಮಿತಿ ಮುಖಂಡ ಇಬ್ರಾಹಿಂ ಸಕಾಫಿ ಪುಂಡೂರು, ಟಿ ಕೆ ಇಬ್ರಾಹಿಂ ಮದನಿ ಕಡಬ, ನಿಜಾರ್ ಸಕಾಫಿ ಮುಡೂರು,ಹನೀಫ್ ಹಾಜಿ ಇಂದ್ರಾಜೆ,ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯರ್ ಕುಂಬ್ರಾ, ಗಾಂಧಿನಗರ ಜುಮಾ ಮಸೀದಿ ಕಮಿಟಿ ಪದಾಧಿಕಾರಿ ಕೆ ಬಿ ಅಬ್ದುಲ್ ಮಜೀದ್, ಮುಖಂಡರಾದ ಸಿದ್ದೀಖ್ ಕಟ್ಟೆಕ್ಕಾರ್ಸ್,ಹನೀಫ್ ಮುಸ್ಲಿಯಾರ್ ಕೆ ಸಿ ಎಫ್, ಮೊದಲಾದವರು ಉಪಸ್ಥಿತರಿದ್ದರು.
ಸಂಗಮದಲ್ಲಿ ಸುಳ್ಯ,ಕಡಬ, ಬೈತಡ್ಕ ರೇಂಜ್ ವ್ಯಾಪ್ತಿಯ ಮದರಸಾಗಳಿಂದ ಐದನೇ ತರಗತಿಯ ಮೇಲ್ಪಟ್ಟ ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಸ್ಎಂಎ ಸಂಘಟನೆಯ ಝೋನಲ್ ಮತ್ತು ರೀಜಿನಲ್ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು,ಮದ್ರಸ ಅಧ್ಯಾಪಕರುಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.
ಎಸ್ ಜೆ ಎಂ ಮುಖಂಡ ಮುಅಲ್ಲಿಮ್ ಅಬ್ದುಲ್ ಲತೀಫ್ ಸಕಾಫಿ ಗೂನಡ್ಕ ಸ್ವಾಗತಿಸಿ,ಎಸ್ ಎಂ ಎ ಮುಖಂಡ ಅಬ್ದುಲ್ ಹಮೀದ್ ಸುಣ್ಣಮೂಲೆ ವಂದಿಸಿದರು. ಝೋನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾಹಿ ಅಹ್ಸನಿ ಕಾರ್ಯಕ್ರಮ ನಿರೂಪಿಸಿದರು.